ಬೇಲ್ ಪುರಿ ಮಾಡೋದು ಹೇಗೆ?

– ಕಲ್ಪನಾ ಹೆಗಡೆ.

ಮನೆಯಲ್ಲೇ ತಯಾರಿಸಿದ ಬೇಲ್ ಪುರಿ ತಿನ್ನಲು ತುಂಬಾ ಚೆನ್ನಾಗಿರತ್ತೆ. ಈ ಅಡುಗೆಯ ಬಗೆಯನ್ನು ನೋಡಿ ಮಾಡ್ತಿರಲ್ವಾ?

ಬೇಕಾಗುವ ಸಾಮಗ್ರಿಗಳು:

1. 1 ಕೆ.ಜಿ. ಕಡ್ಲೆಪುರಿ (ಮಂಡಕ್ಕಿ)
2. 100 ಗ್ರಾಂ ಕಾರಾ ಶೇವ್
3. 2 ಈರುಳ್ಳಿ
4. 2 ಕ್ಯಾರೇಟ್
5. 1 ಟೊಮೇಟೊ
6. 6 ರಿಂದ 10 ಚಮಚ ಟೊಮೇಟೊ ಸಾಸ್ (ಮ್ಯಾಗಿ ಹಾಟ್ & ಸ್ವೀಟ್)
7. ಕೊತ್ತಂಬರಿ ಸೊಪ್ಪು

ಮಾಡುವ ಬಗೆ:

ಮೊದಲು ಕಡ್ಲೆಪುರಿಯನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ. ಆಮೇಲೆ ಕ್ಯಾರೇಟ್‍ನ್ನು ತುರಿದು ಹಾಕಿ. ಆನಂತರ ಈರುಳ್ಳಿಯನ್ನು ಹಾಗೂ ಟೊಮೇಟೊವನ್ನು ಸಣ್ಣದಾಗಿ ಹೆಚ್ಚಿ ಹಾಕಿಕೊಳ್ಳಿ. ಕಾರಾ ಶೇವ್, ಹೆಚ್ಚಿದ ಕುತ್ತೂಂಬರಿ ಸೊಪ್ಪು ಹಾಗೂ ಟೊಮೇಟೊ ಸಾಸನ್ನು ಹಾಕಿ ಕೈಯಿಂದ ಅತವಾ ಸೌಟಿನಿಂದ ಚೆನ್ನಾಗಿ ಕಲಸಿಕೊಳ್ಳಿ. ನೀವು ತಯಾರಿಸಿದ ಬೇಲ್ ಪುರಿಯನ್ನು ತಟ್ಟೆಗೆ ಹಾಕಿ ತಿನ್ನಲು ನೀಡಿ.

(ಚಿತ್ರ ಸೆಲೆ: ಕಲ್ಪನಾ ಹೆಗಡೆ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: