ಹಸಿವೇ ಏನಿದು ನಿನ್ನ ರಗಳೆ

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ).

ಹಸಿವೇ ಏನಿದು ನಿನ್ನ ರಗಳೆ
ಹುಟ್ಟಿದಾಗಿನಿಂದ ನನ್ನ ಕಾಡುತಿರುವೆ
ಸಮಯಕ್ಕೆ ಸರಿಯಾಗಿ ಎಚ್ಚರಿಸುವೆ
ಕೊಡದಿದ್ದರೆ ರುದ್ರ ತಾಂಡವ ಆಡಿಸುವೆ

ಕರೆದವರ ಮದುವೆಗೆ ತಪ್ಪದೆ ಹೋದರೆ
ಅಲ್ಲಿಯೂ ಬಿಡದೆ ನೀ ನನ್ನ ಕಾಡುವೆ
ನವ ದಂಪತಿಗೆ ಶುಬ ಕೋರುವ ಮುಂಚೆಯೇ
ಕೂರಿಸುವೆ ಮೊದಲ ಪಂಕ್ತಿಗೆ ತಟ್ಟೆ ಮುಂದೆಯೇ

ದೇವರ ದರುಶನ ಮಾಡಲು ಹೋದರೆ
ಅಲ್ಲಿಯೂ ನಿನ್ನದೆ ನನಗೆ ತೊಂದರೆ
ಕೈ ಮುಗಿದು, ತೀರ‍್ತ ಪಡೆದ ಕೂಡಲೆ
ನಡೆಸುವೆ ಪ್ರಸಾದ ಕೊಡುವ ಕಡೆಗೆ

ಎಶ್ಟೇ ದೂರ ಹೋದರು, ಬೂಮಿ ಸುತ್ತಿದರು
ಯಾರೇ ದೂರವಾದರು, ನಿನ್ನ ಬೇಡಿಕೆ ನಿಲ್ಲದು
ಏನೇ ಕಾರಣ ಕೊಟ್ಟರು, ನಿನ್ನ ಮುಂದೆ ನಡೆಯದು
ಪೂರಕವಾಗಿದ್ದರೆ ಒಳಿತು, ಇಲ್ಲವಾದರೆ ತಪ್ಪದು ಕೆಡಕು

(ಚಿತ್ರ ಸೆಲೆ: firstpost.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: