ಹಬ್ಬದ ಸಿಹಿ ಅಡುಗೆ ಕಡಲೆಬೇಳೆ ಹೋಳಿಗೆ

– ಸವಿತಾ.

ಹೋಳಿಗೆ, ಒಬ್ಬಟ್ಟು, hoLige

ಬೇಕಾಗುವ ಸಾಮಾಗ್ರಿಗಳು:

1. ಕಡಲೆಬೇಳೆ – 1/4 ಕೆಜಿ
2. ಬೆಲ್ಲ – 3/4 ಇಲ್ಲವೇ ಮುಕ್ಕಾಲು ಲೋಟ
3. ಮೈದಾ ಇಲ್ಲವೇ ಗೋದಿ ಹಿಟ್ಟು – 1 ಲೋಟ
4. ಚಿರೋಟಿ ರವೆ – 1/2 ಲೋಟ
5. ಎಣ್ಣೆ – 1 ಲೋಟ
6. ಏಲಕ್ಕಿ – 4
7. ಗಸಗಸೆ – 1 ಚಮಚ

ಮಾಡುವ ಬಗೆ:

ಮೈದಾ/ಗೋದಿ ಹಿಟ್ಟು ಹಾಗೂ ರವೆಯನ್ನು ಸೇರಿಸಿ, ನೀರನ್ನು ಹಾಕಿ ಚಪಾತಿ ಹದಕ್ಕೆ ಕಲಸಿಕೊಂಡು ಒಂದು ಗಂಟೆ ಇಡಿ. ಕಡಲೆಬೇಳೆಗೆ ಚೂರು ನೀರನ್ನು ಹಾಕಿ ಕುಕ್ಕರಿನಲ್ಲಿ ಮೂರು ಕೂಗು ಕೂಗಿಸಿ. ಬಳಿಕ ಒಂದು ಪಾತ್ರೆಯಲ್ಲಿ ಬೇಯಿಸಿದ ಬೇಳೆ, ಬೆಲ್ಲ ಸೇರಿಸಿ ಬಿಸಿ ಮಾಡಿ (ಬೆಲ್ಲ ಕರಗಿದರೂ ಸಾಕು). ಬೆಲ್ಲ ಹಾಗೂ ಬೇಳೆಯ ಮಿಶ್ರಣ ಸ್ವಲ್ಪ ಆರಿದ ನಂತರ ಮಿಕ್ಸರ್ ನಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಬಳಿಕ ಏಲಕ್ಕಿ ಹಾಗೂ ಗಸಗಸೆಯನ್ನು ಪುಡಿಮಾಡಿ ಸೇರಿಸಿ. ಇದಿಶ್ಟು ಹೋಳಿಗೆ ಮಾಡಲು ಬಳಸುವ ಹೂರಣ.

ಈಗ ಚಪಾತಿ ಹದಕ್ಕೆ ಕಲಸಿಟ್ಟ ಹಿಟ್ಟಿನಿಂದ ಸಣ್ಣ ಉಂಡೆ ಅಳತೆಯ ಹಿಟ್ಟನ್ನು ತೆಗೆದುಕೊಂಡು ಚಪ್ಪಟೆಯಾಕಾರಕ್ಕೆ ತಟ್ಟಿ, ಅದರ ನಡುವೆ ಒಂದು ಉಂಡೆ ಹೂರಣವನ್ನು ಇಟ್ಟು, ಹಿಟ್ಟಿನಿಂದ ಹೂರಣವನ್ನು ಮುಚ್ಚಿ ಲಟ್ಟಣಿಗೆಯಿಂದ ಇಲ್ಲವೇ ಕೈಯಲ್ಲೇ ಹೋಳಿಗೆಯನ್ನು ಲಟ್ಟಿಸಿರಿ. ಬಿಸಿ ಹೆಂಚಿಗೆ ಎಣ್ಣೆ ಸವರಿ ಹೋಳಿಗೆಯನ್ನು ಎರಡು ಬದಿ ಹದವಾಗಿ ಬೇಯಿಸಿದರೆ ಬಿಸಿಬಿಸಿ ಹೋಳಿಗೆ ಸಿದ್ದ. ಹಬ್ಬದ ವಿಶೇಶ ಅಡುಗೆ ಹೋಳಿಗೆಯನ್ನು ತುಪ್ಪದೊಂದಿಗೆ ಸವಿಯಿರಿ.

(ಚಿತ್ರ ಸೆಲೆ: ಸವಿತಾ )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: