ಕನ್ನಡ ನುಡಿ ಚಂದ, ಚಿಲಿಪಿಲಿ ಶ್ರೀಗಂದ!

– ಚಂದ್ರಗೌಡ ಕುಲಕರ‍್ಣಿ.

ಅಮ್ಮನ ಜೋಗುಳ ಹಾಡಿನ ಕಂಪನು
ಸುಮ್ಮನೆ ನಗುತಿಹ ಮಗುವಿನ ಬಗೆಯನು
ಕಮ್ಮನೆ ಪದದಲಿ ಅಡಗಿಸಿಬಿಡುವ ಕನ್ನಡ !

ಹಾಲ ಹಸುಳೆಯ ತೊದಲಿನ ಮಾತನು
ಜೋಲು ಜೊಲ್ಲಿನ ಜೇನಿನ ಸವಿಯನು
ಲೀಲೆಯ ಪದದಲಿ ಪಡಿಮೂಡಿಸುವ ಕನ್ನಡ !!

ತೊಟ್ಟಿಲ ಗುಬ್ಬಿಯ ಬಣ್ಣದ ಹೊಳಪನು
ಬಟ್ಟಲ ಅನ್ನದ ಸವಿರುಚಿ ಬೆಡಗನು
ನೆಟ್ಟನೆ ಪದದಲಿ ಅಡಗಿಸಿಬಿಡುವ ಕನ್ನಡ !

ಕೂಸು ಕಂದನ ರಾಗದ ಕೂಗನು
ಹಾಸು ಕೌದಿಯ ಕಸೂತಿ ಸೊಗಸನು
ಸಾಸಿರ ಪದದಲಿ ಪಡಿಮೂಡುಸುವ ಕನ್ನಡ !!

ಚಿಕ್ಕ ಮಕ್ಕಳ ಗಿಳಿಯಿಂಚರವನು
ಪಕ್ಕನೆ ಮಿಂಚಿದ ಮೋಡದ ಬೆರಗನು
ಚೊಕ್ಕ ಪದದಲಿ ಅಡಗಿಸಿಬಿಡುವ ಕನ್ನಡ !

ಪುಟ್ಟ ಪಾಪನ ಹೆಜ್ಜೆ ಗುರುತನು
ಗಟ್ಟಿ ಗೆಜ್ಜೆಯ ಕಿಂಕಿಣಿ ಸ್ವರವನು
ಗುಟ್ಟಿನ ಪದದಲಿ ಪಡಿಮೂಡಿಸುವ ಕನ್ನಡ !!

ಕನ್ನಡ ನುಡಿ ಚಂದ
ಚಿಲಿಪಿಲಿ ಶ್ರೀಗಂದ

(ಚಿತ್ರ ಸೆಲೆ: OneIndia Kannada)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. bkrs setty says:

    ಕನ್ನಡ ಕಸ್ತೂರಿ . ನಿಜ. ನಮನ.

ಅನಿಸಿಕೆ ಬರೆಯಿರಿ:

%d bloggers like this: