ಮೊಗದಲಿ ಮಂದಹಾಸ ಮೂಡಲಿ

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ).

ಮೆಲ್ಲಮೆಲ್ಲನೆ ಕೆಲಸ ಶುರು ಮಾಡಿದ ನೇಸರ
ತೋರುತಿಹರು ಒಲ್ಲದ ಮನಸಲಿ ಅವಸರ
ಮುಗಿದೆ ಹೋಯಿತು ವಾರಾಂತ್ಯ ಸರಸರ
ಅದಕ್ಕೇ ಅಲ್ಲವೆ ಸೋಮವಾರವೆಂದರೆ ಬೇಸರ

ಕಚೇರಿಗೆ ಹೋಗಲು ಟ್ರಾಪಿಕ್‌ನದೇ ಚಿಂತೆ
ಗ್ರುಹಿಣಿಯರಿಗೆ ತಿಂಡಿ ಮಾಡುವ ಚಿಂತೆ
ಮಕ್ಕಳಿಗೆ ಹೋಂ ವರ‍್ಕ್‌ನ ಚಿಂತೆ
ಇದೆಲ್ಲದರ ಮದ್ಯೆ ಹಚ್ಚಿ ನಗುವಿನ ಹಣತೆ

ಉಲ್ಲಾಸ, ಉತ್ಸಾಹ ಸದಾ ನಿಮ್ಮ ಜೊತೆಗಿರಲಿ
ವಾರಗಳ ಲೆಕ್ಕ ಮಾಡದೆ ಕೆಲಸ ಮುಂದುವರೆಯಲಿ
ಯಾಕೆಂದರೆ ಸಂಬಳದ ವಾರ ನಿಮಗೆ ನೆನಪಿರಲಿ
ಈಗಲಾದರು ಮೊಗದಲಿ ಮಂದಹಾಸ ಮೂಡಲಿ

( ಚಿತ್ರ ಸೆಲೆ: thoughtsonliberty.com )

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. C MARIE JOSEPH says:

    ಚೆನ್ನಾಗಿದೆ

ಅನಿಸಿಕೆ ಬರೆಯಿರಿ: