ಸಿಹಿ ಪ್ರಿಯರಿಗೆ ಗೋದಿ ಹುಗ್ಗಿ
– ಸವಿತಾ.
ಬೇಕಾಗುವ ಪದಾರ್ತಗಳು:
- 1/4 ಕೆಜಿ ಪಾಲಿಶ್ ಮಾಡಿದ ಗೋದಿ
- 1/4 ಕೆಜಿ ಬೆಲ್ಲ
- 1 ಚಮಚ ಗಸಗಸೆ
- 8 ಏಲಕ್ಕಿ
- 2 ಲವಂಗ
- 1/4 ಬಾಗ ಜಾಯಿಕಾಯಿ
- 2 ಚಮಚ ಒಣ ಕೊಬ್ಬರಿ ತುರಿ
- 6 ಗೋಡಂಬಿ
ಮಾಡುವ ಬಗೆ:
- ಗೋದಿಯನ್ನು ಹಿಂದಿನ ದಿನ ರಾತ್ರಿ ನೀರಲ್ಲಿ ನೆನೆ ಇಡುವುದು.
- ಮರುದಿನ ಬೆಳಿಗ್ಗೆ ಕುಕರ್ ನಲ್ಲಿ ಗೋದಿಗೆ 6 ಲೋಟ ನೀರು ಹಾಕಿ 12 ವಿಶಲ್ ಕೂಗಿಸಿರಿ.
- ಆರಿದ ನಂತರ ಗೋದಿಯನ್ನು, ಕೈಯಿಂದ ಅತವಾ ಬೇಳೆ ಅರಿಯುವ ಕಟ್ಟಿಗೆ ಚಮಚದಿಂದ ಮಸೆಯಿರಿ.
- ಬೆಲ್ಲ ಸೇರಿಸಿ ಒಲೆ ಮೇಲೆ ಕುದಿಯಲು ಇಡಿ.
- ಬೆಲ್ಲ ಕರಗಿ ನೀರಾಗಿ ಗೋದಿ ಜೊತೆ ಹೊಂದಲು ಒಂದು ಕುದಿ ಕುದಿಸಿ.
- ಗಸಗಸೆ, ಏಲಕ್ಕಿ, ಲವಂಗ, ಜಾಯಿಕಾಯಿ ಸ್ವಲ್ಪ ಹುರಿದು ಪುಡಿ ಮಾಡಿ ಹಾಕಿ.
- ಒಣಕೊಬ್ಬರಿ ತುರಿ ಹಾಕಿ ಕೈಯಾಡಿಸಿ.
- ಗೋಡಂಬಿಯಿಂದ ಅಲಂಕರಿಸಿ ಗೋದಿ ಹುಗ್ಗಿ ತಿನ್ನಲು ಕೊಡಿ.
ಇತ್ತೀಚಿನ ಅನಿಸಿಕೆಗಳು