ಸಾಬುದಾನಿ(ಸಬ್ಬಕ್ಕಿ) ವಡೆ
– ಮಾನಸ ಎ.ಪಿ.
ಏನೇನು ಬೇಕು?
- ಸಾಬೂದಾನಿ(ಸಬ್ಬಕ್ಕಿ) – 1/2 ಕೆಜಿ
- ಬಟಾಟಿ(ಆಲೂಗಡ್ಡೆ)- 2
- ಹಸಿ ಮೆಣಸಿನಕಾಯಿ ಚಟ್ನಿ – 2-3 ಚಮಚ
- ಜೀರಿಗೆ – 1/2 ಚಮಚ
- ಹುರಿದ ಶೇಂಗಾ ಪುಡಿ – ಒಂದು ಹಿಡಿ
- ಉಪ್ಪು – ರುಚಿಗೆ ತಕ್ಕಶ್ಟು
- ಸಕ್ಕರೆ – ರುಚಿಗೆ ತಕ್ಕಶ್ಟು
ಮಾಡುವ ಬಗೆ
- ಸಾಬುದಾನಿ ಒಂದು ಪಾತ್ರೆಯಲ್ಲಿ ತೆಗೆದುಕೊಂಡು ನೀರು ಹಾಕಿ ತೊಳೆಯಿರಿ
- ನಂತರ ನೀರು ಬಸಿದು 4 ತಾಸು ನೆನಸಿಡಬೇಕು
- ನೆನೆದ ಸಾಬೂದಾನಿಗೆ ಆಲೂಗಡ್ಡೆ ತುರಿದು ಹಾಕಿ. ಜೊತೆಗೆ ಜೀರಿಗೆ, ಶೇಂಗಾ ಪುಡಿ, ಹಸಿಮೆಣಸಿನಕಾಯಿಯ ಚಟ್ನಿ, ಉಪ್ಪು,ಸಕ್ಕರೆ – ಎಲ್ಲವನ್ನು ಸೇರಿಸಿ ಕಲಿಸಿ 10 ನಿಮಿಶ ಬಿಡಿ
- ನಂತರ ಕಾಯ್ದ ಎಣ್ಣೆಯಲ್ಲಿ ನಿಮಗೆ ಬೇಕಾದ ಆಕಾರದಲ್ಲಿ ಗರಿ ಗರಿಯಾಗಿ ಹೊಂಬಣ್ಣ ಬರುವವರೆಗೂ ಕರಿಯಿರಿ
ರುಚಿಯಾದ, ಸವಿಯಾದ ಸಾಬುದಾನಿ ವಡೆ ಈಗ ತಯಾರು. ಕೊಬ್ಬರಿ ಚಟ್ನಿಯೊಂದಿಗೆ ತಿನ್ನಲು ಚೆನ್ನಾಗಿರುತ್ತದೆ.
ಇತ್ತೀಚಿನ ಅನಿಸಿಕೆಗಳು