ರುಚಿಕರವಾದ ಮೆಂತ್ಯಮುದ್ದೆ ಮಾಡಲು ಬೇಕಾದ ಮೆಂತ್ಯಹಿಟ್ಟು

– ಬವಾನಿ ದೇಸಾಯಿ.

ಮಂತ್ಯೆ ಹಿಟ್ಟು

ಮಂತ್ಯಮುದ್ದೆ ಮಾಡಿ ಸವಿಯಬೇಕೆಂದರೆ ಮೊದಲು ಮೆಂತ್ಯದ ಹಿಟ್ಟನ್ನು ಮಾಡಿ ಇಟ್ಟುಕೊಳ್ಳಬೇಕು. ರುಚಿಕರವಾದ ಮೆಂತ್ಯಮುದ್ದೆ ಮಾಡಲು ಬೇಕಾದ ಮೆಂತ್ಯಹಿಟ್ಟನ್ನು ಮಾಡುವ ಬಗೆ ಇಲ್ಲಿದೆ ನೋಡಿ.

ಬೇಕಾಗುವ ಸಾಮಾನುಗಳು ಹಾಗೂ ಅಳತೆ

ಕಡ್ಲೆಬೇಳೆ – 1 ಲೋಟ
ಉದ್ದಿನಬೇಳೆ – 1 ಲೋಟ
ಹೆಸರುಬೇಳೆ – 1 ಲೋಟ
ತೊಗರಿಬೇಳೆ – 1 ಲೋಟ
ಗೋದಿ – 1 ಲೋಟ
ಮೆಂತ್ಯ ಕಾಳು – 1/4 ಲೋಟ
ಅರಿಶಿನ ಪುಡಿ – ಒಂದು ಚಮಚ
ಇಂಗು – ಸ್ವಲ್ಪ

ಮಾಡುವ ಬಗೆ

  • ಎಲ್ಲಾ ಬೇಳೆಗಳನ್ನು ಒಂದೊಂದಾಗಿ ಸಣ್ಣ ಉರಿಯಲ್ಲಿ ಹುರಿಯಿರಿ.
  • ಇಂಗು ಮತ್ತು ಅರಿಶಿಣ ಪುಡಿಯನ್ನು ಸ್ವಲ್ಪ ಬಿಸಿ ಮಾಡಿ.
  • ಕೊನೆಗೆ, ಹುರಿದ ಎಲ್ಲ ಕಾಳುಗಳು, ಇಂಗು, ಅರಿಶಿನ ಪುಡಿ ಸೇರಿಸಿ ಪುಡಿ ಮಾಡಿದರೆ, ಮೆಂತ್ಯದ ಹಿಟ್ಟು ಸಿದ್ದ.

ವಿ.ಸೂ. :
– ಎಲ್ಲ ಕಾಳುಗಳನ್ನು ಹೊಂಬಣ್ಣ ಬರುವವರೆಗೆ ಹುರಿದು, ಸ್ವಲ್ಪ ಸಮಯದವರೆಗೆ ಆರಲು ಬಿಡಿ, ಬಿಸಿಯಾಗಿರುವಾಗ ಪುಡಿ ಮಾಡಕೂಡದು.

– ಹೆಸರು ಮಾತ್ರ ಮೆಂತ್ಯದ ಹಿಟ್ಟು, ಹಾಗಂತ ತುಂಬಾ ಮೆಂತ್ಯದ ಕಾಳು ಹಾಕದಿರಿ.

(ಚಿತ್ರ ಸೆಲೆ: ಬವಾನಿ ದೇಸಾಯಿ. )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks