ಬಾ ತಾಯೆ ಎನ್ನ ಮನದ ಮಂದಿರಕೆ

– ಸ್ಪೂರ‍್ತಿ. ಎಂ.

ಬಾ ತಾಯೆ ಎನ್ನ
ಮನದ ಮಂದಿರಕೆ
ಬಾ ತಾಯೆ ಎನ್ನ
ಕೈ ಹಿಡಿದು ರಕ್ಶಿಪುದಕೆ

ಚಿದ್ರವಾಗಿದೆ ಮನವು
ಬಾವನೆಗಳಬ್ಬರಕೆ
ಶಾಂತವಾಗಲಿ ಮನವು
ನಿನ್ನ ಪಾದ ಸ್ಪರ‍್ಶಕೆ

ಅಂದಕಾರದಿ ಬದುಕು
ಕಂಗಾಲಾಗಿದೆ
ಬೆಳಕಾಗದು ಬದುಕು
ನೀ ದಯೆ ತೋರದೆ

ಲೌಕಿಕ ಬದುಕಿಗೆ
ಮನ ಬೇಸತ್ತಿದೆ
ಅಲೌಕಿಕ ಬದುಕಿಗೆ
ಮನ ಕಾತರಿಸುತ್ತಿದೆ

ಬಾ ತಾಯೆ ಎನ್ನ
ಮನದ ಮಂದಿರಕೆ
ಬಾ ತಾಯೆ ಎನ್ನ
ಉದ್ದರಿಸುವುದಕೆ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: