ಸಾವಿರದ ನಿಜವ ತೋರುವ ಪುಸ್ತಕ

– ಚಂದ್ರಗೌಡ ಕುಲಕರ‍್ಣಿ.book, knowledge, ಪುಸ್ತಕ, ಹೊತ್ತಗೆ

ನುಡಿಮುತ್ತ ಹರಳುಗಳ
ಒಡಲಲ್ಲಿ ಹೊತ್ತಿರುವ
ಕಡಲಿನ ಆಳ ಬಗೆಬಗೆದು ತೋರುವ
ಸಡಗರದ ಲೋಕ ಪುಸ್ತಕ

ಬಾನಚುಕ್ಕೆಯ ಬೆರಗು
ಕಾನನದ ಸಿರಿ ಸೊಬಗು
ದ್ಯಾನದಲಿ ಬೆಸೆದು ಅಕ್ಶರಕೆ ಇಳಿಸಿರುವ
ಜಾಣತನದ ತೊಡುಗೆ ಹೊತ್ತಿಗೆಯು

ಬಾವದಾಚೆಯ ಬಯಲ
ಜೀವದಕ್ಶರಕಿಳಿಸಿ
ಸಾವಿರದ ನಿಜವ ತೋರುವ ಪುಸ್ತಕವು
ಹೂವು ಪರಿಮಳದ ತವನಿದಿಯು

(ಚಿತ್ರ ಸೆಲೆ: pexels.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: