ನಾ ನಿನ್ನ ಮುಂಗುರುಳಾದರೆ

– ವೆಂಕಟೇಶ ಚಾಗಿ.

 

ಅದೆಶ್ಟು ಸಲೀಸು
ಆ ನಿನ್ನ ಮುಂಗುರುಳಿಗೆ
ನೀ ಬೇಡವೆಂದರೂ
ಮತ್ತೆ ಮತ್ತೆ ಕಳ್ಳನಂತೆ
ಬಂದು, ಕೆನ್ನೆಗೆ ಮುತ್ತಿಕ್ಕಿ
ಮತ್ತೆ ಮರೆಯಾಗುವ
ಆ ಮುಂಗುರುಳ ತುಂಟತನ

ನನಗೂ ಅಸೂಯೆ ಗೆಳತಿ
ನಾನೂ ನಿರ‍್ವಹಿಸಲೇ
ಅದರ ಪಾತ್ರ?
ಅದೊಂದು ಅವಕಾಶ
ದೊರೆತರೆ ಕಳೆದುಕೊಳ್ಳಲಾರೆ ನಾನೆಂದೂ

ತಂಗಾಳಿಗೆ ಒಂದಿಶ್ಟು
ಲಂಚ ಕೊಟ್ಟು
ಬೇಡಿಯಾದರೂ ಸರಿ
ನಿನ್ನ ಮುಂಗುರುಳಾಗುವ
ನನ್ನ ಆಸೆ ನನಸಾಗುವ ಬಯಕೆ

ಗೆಳತಿ, ನಿನಗೊಂದು ವಿನಂತಿ ಇಶ್ಟೇ
ನಾ ಮುಂಗುರುಳಾದರೆ
ಸರಿಸದಿರು ಮತ್ತೆ ಮತ್ತೆ
ನನ್ನನ್ನು ಕಿವಿಯ ಹಿಂದೆ.
ಆ ಮುಂಗುರುಳೇ ನಾನೆಂಬ
ಮಾಹಿತಿ ನಿನಗಿರಲಿ

(ಚಿತ್ರ ಸೆಲೆ: pexels.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: