ನೆನೆವುದೇತಕೆ ಮನ

– ವಿಶ್ವನಾತ್ ರಾ. ನಂ.

ನೆನಪು, ನಿನ್ನ ನೆನಪು, memories

ನೆನೆವುದೇತಕೆ ಮನ… ನಿನ್ನ ಪ್ರತಿಕ್ಶಣ
ನುಡಿವುದೇತಕೆ ಮೌನ… ನಿನ್ನ ಕಂಡ ಕ್ಶಣ

ಮನಸಿನಾಳದ ಸುಪ್ತ ನದಿಯಲ್ಲೇನೋ ಕಲರವ
ಕನಸ ಕಾಣದ ತಪ್ತ ಕಣ್ಣಲ್ಲೇನೋ ಬಣ್ಣದೋತ್ಸವ

ನೀ ಬಂದೆಯೇನೋ
ನೀ ಕರೆದೆಯೇನೋ ಎನ್ನ

ಏಕತಾನತೆಯ ಹ್ರುದಯ ಮಿಡಿತದಲ್ಲೇನೋ ಹೊಸ ವೇಗ
ರಾಗಲಯದ ಬಾವಗೀತೆಯಲ್ಲೇನೋ ಹೊಸ ಬಾವ

ನೀ ಗುನುಗಿದೆಯೇನೋ
ನೀ ನೆನೆದೆಯನೋ ಎನ್ನ

ನೆನೆವುದೇತಕೆ ಮನ… ನಿನ್ನ ಪ್ರತಿಕ್ಶಣ

(ಚಿತ್ರ ಸೆಲೆ: unsplash.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: