ಕವಿತೆ: ಜೀವನ ಮಂತನ

– ವೆಂಕಟೇಶ ಚಾಗಿ.

ಹಕ್ಕಿ

ನಾನಾರು ಇಲ್ಲಿ ನೀನಾರು
ಈ ಜೀವನ ಎಂಬುದೇ ಸಂದಾನ
ಸುಕ ದುಕ್ಕಗಳ ಮಂತನದೊಳಗೆ
ಕಾಲನ ಆಟವೇ ಅನುದಾನ

ಸಪ್ತ ಸಾಗರಗಳ ಆಚೆ ಇದ್ದರೂ
ಮನಸು ಮನಸುಗಳ ಸಮ್ಮಿಲನ
ಕಾಣದ ಕಲ್ಪನಾ ಲೋಕದೊಳಗೆ
ಅಮ್ರುತ ಎನಿಸುವ ನಂದನ

ಮೂರ‍್ತ ಅಮೂರ‍್ತಗಳ ಪರಿಮಿತಿಯೊಳಗೆ
ಯೋಚನಾ ಲಹರಿಯ ಸಂತಾನ
ಅರಳುವ ಹೂವಿನ ತಾಳ್ಮೆ ಶಿಕರಕೆ
ಬದುಕಿನ ಸ್ಪಶ್ಟತೆಯ ಬಹುಮಾನ

ಜನನ ಮರಣಗಳ ಮಾಯೆಯ ನಡುವೆ
ಬದುಕಿನ ಹೆಜ್ಜೆಗಳಿಂದಲೇ ಕಂಪನ
ಮುಂದಿನ ನೋವುನಲಿವಿಗೆ ಚಿಂತೆ ಏತಕೆ
ದೂರವಾಗಿಸು ಇಂದೇ ಬಂದನ

(ಚಿತ್ರ ಸೆಲೆ: pixabay )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *