ಹೇಗೆ ಮರೆಯಲಿ ಗೆಳೆಯಾ

– ಸಿಂದು ಬಾರ‍್ಗವ್.

thinking of you, love, ಹೇಗೆ ಮರೆಯಲಿ, ಮರೆಯಲಾರೆ, ಗೆಳೆಯ

ಹೇಗೆ ಮರೆಯಲಿ ಗೆಳೆಯಾ
ಮುಂಜಾನೆಯ ನೆನಪಿನಲಿ
ಮುಸ್ಸಂಜೆಯ ನೆರಳಿನಲಿ
ನೀನೇ ಸುಳಿಯುತಿರುವಾಗ

ಹೇಗೆ ಮರೆಯಲಿ ಗೆಳೆಯಾ
ಅರಳಿದ ಸುಮದಲ್ಲಿ
ಹರಡಿದ ಗಮದಲ್ಲಿ
ನೀನೇ ತುಂಬಿರುವಾಗ

ಹೇಗೆ ಮರೆಯಲಿ ಗೆಳೆಯಾ
ಹರಿಯುವ ಜರಿಯಲ್ಲಿ
ತೇಲುವ ನೊರೆಯಲ್ಲಿ
ನೀನೇ ಬೆರೆತಿರುವಾಗ

ಹೇಗೆ ಮರೆಯಲಿ‌ ಗೆಳೆಯಾ
ಸಂಜೆಯ ಸಿಹಿಗಾಳಿಯಲಿ
ಸಾಲು ಬೀದಿದೀಪಗಳಲಿ
ನೀನೇ ನಗುತಿರುವಾಗ

ಹೇಗೆ ಮರೆಯಲಿ ಗೆಳೆಯಾ
ಉಸಿರಿನಲು ಹೆಸರಿನಲು
ಕನಸಿನಲು ನನಸಿನಲೂ
ನೀನೇ ಜೊತೆಗಿರುವಾಗ

ಹೇಗೆ ಮರೆಯಲಿ ಗೆಳೆಯಾ
ಯಾವ ರೂಪದಲ್ಲಾದರೂ
ಯಾವ ರೀತಿಯಲ್ಲಾದರೂ
ಯಾವ ಸಲುಗೆಯಲ್ಲಾದರೂ
ಯಾವ ಗಳಿಗೆಯಲ್ಲಾದರೂ
ನಿನ್ನ ಬೇಟಿ ಆಗೇ ಆಗುವುದು

ಎನಗೆ ಕಾತರಿಯಿದೆ
ಎನಗೆ ನಂಬಿಕೆಯಿದೆ
ನಮ್ಮ ಪ್ರೀತಿಯ ಗಂಟು ಗಟ್ಟಿಯಾಗಿಹುದು ಎಂದು

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

3 Responses

  1. padmanabha d says:

    ಸುಂದರ ಕವಿತೆ

  2. Mohana N says:

    nice ?..

ಅನಿಸಿಕೆ ಬರೆಯಿರಿ: