ಜೋಳದ ಹಿಟ್ಟಿನ ತಾಲಿಪಟ್ಟು
– ಸವಿತಾ.
ಬೇಕಾಗುವ ಸಾಮಾಗ್ರಿಗಳು:
2 ಬಟ್ಟಲು ಜೋಳದ ಹಿಟ್ಟು
1/4 ಬಟ್ಟಲು ಕಡಲೇಹಿಟ್ಟು
1/4 ಉದ್ದಿನ ಹಿಟ್ಟು
6 ಹಸಿ ಮಣಸಿನಕಾಯಿ
1/2 ಚಮಚ ಜೀರಿಗೆ
ಸ್ವಲ್ಪ ಕರಿಬೇವು, ಕೊತ್ತಂಬರಿ
ಉಪ್ಪು ರುಚಿಗೆ ತಕ್ಕಶ್ಟು
1 ಈರುಳ್ಳಿ
1 ಟೊಮೆಟೊ
1 ಸೌತೆಕಾಯಿ
ಸ್ವಲ್ಪ ಅರಿಶಿನ
1 ಚಮಚ ಕಾದ ಎಣ್ಣೆ
ಮಾಡುವ ಬಗೆ:
ಮೊದಲಿಗೆ ಸೌತೆಕಾಯಿ ತುರಿದು ಇಟ್ಟು ಕೊಳ್ಳಿರಿ. ಈರುಳ್ಳಿ ಮತ್ತು ಟೊಮೆಟೊ ಅನ್ನು ಸಣ್ಣದಾಗಿ ಹೆಚ್ಚಿ ಇಟ್ಟುಕೊಳ್ಳಿ. ಹಸಿಮೆಣಸಿನಕಾಯಿ, ಜೀರಿಗೆ, ಉಪ್ಪು, ಕರಿಬೇವು, ಕೊತ್ತಂಬರಿ ಸೊಪ್ಪು ಅರೆದು ಪೇಸ್ಟ್ ಮಾಡಿ ಹಾಕಿರಿ. ಜೋಳದ ಹಿಟ್ಟು ಮತ್ತು ಕಡಲೇಹಿಟ್ಟು, ಉದ್ದಿನ ಹಿಟ್ಟು ಕಾದ ಎಣ್ಣೆ ಮತ್ತು ಉಳಿದ ಎಲ್ಲಾ ಸಾಮಾನು ಹಾಕಿ ಸ್ವಲ್ಪ ನೀರು ಹಾಕಿ ಸಾಮಾನ್ಯ ಹದಕ್ಕೆ ಕಲಸಿಕೊಳ್ಳಿರಿ. ಕಾದ ತವೆಯ ಮೇಲೆ ಒಂದು ಚಮಚ ಹಿಟ್ಟು ಹಾಕಿ ತಣ್ಣೀರಿನಲ್ಲಿ ಕೈ ಅದ್ದಿ ಹಾಕಿದ ಹಿಟ್ಟನ್ನು ಅಗಲ ಮಾಡಿ. ಸ್ವಲ್ಪ ಎಣ್ಣೆ ಹಾಕಿ ಒಂದು ತಟ್ಟೆ ಮುಚ್ಚಿ. ಆಮೇಲೆ ಎರಡೂ ಬದಿ ಸ್ವಲ್ಪ ಕೆಂಬಣ್ಣ ಬರುವವರೆಗೆ ಬೇಯಿಸಿ ತೆಗೆದರೆ, ಜೋಳದ ಹಿಟ್ಟಿನ ತಾಲಿಪಟ್ಟು ಸಿದ್ದ.
(ಚಿತ್ರ ಸೆಲೆ: ಸವಿತಾ.)
ಇತ್ತೀಚಿನ ಅನಿಸಿಕೆಗಳು