ಕವಿತೆ : ನೆನಪಿನ ಸುತ್ತ

ಸ್ಪೂರ‍್ತಿ. ಎಂ.

ನೆನಪು, Memories

ಅಂದು ನೀನು ನನ್ನ ಬಳಿಯಿದ್ದೆ
ಇಂದದರ ನೆನಪು ಮಾತ್ರ ಉಳಿದಿದೆ

ಅಂದು ನಿನ್ನಾದರದಲ್ಲಿ ನಾನು ಮಿಂದಿದ್ದೆ
ಇಂದು ಆ ಪ್ರೀತಿ ನೀಡದೆ ಎಲ್ಲಿ ಹೋದೆ?

ಅಂದು ನೀನು ನನ್ನ ಕಣ್ಣೀರ ಒರೆಸಿದೆ
ಇಂದು ನಿನಗಾಗಿ ನಾ ಕಣ್ಣೀರ ಸುರಿಸಿದೆ

ಅಂದು ನನ್ನಲ್ಲಿ ಸ್ನೇಹದ ಬೀಜ ಬಿತ್ತಿದೆ
ಇಂದು ಆ ಬೀಜ ಹೆಮ್ಮರವಾಗಿ ಬೆಳೆದಿದೆ

ಅಂದಿನ ನಿನ್ನ ನೆನಪು ಮದುರವಾಗಿದೆ
ಹೇಳು ಇಂದು ಅದಕೆ ಸಾಟಿ ಏನಿದೆ ?

ಅಂದು ನನ್ನ ಮನದಲ್ಲಿ ಪ್ರೀತಿಯ ದೀಪ ಹಚ್ಚಿದೆ
ಕೊನೆವರೆಗೂ ಅದು ಉರಿಯುತ್ತಲಿರುತ್ತದೆ

( ಚಿತ್ರಸೆಲೆ : cainellsworth.com )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.