
Together Back Light Friendship Figures Funny Fun
ಕವಿತೆ : ಗೆಳೆತನವೆಂದರೆ
– ವಿನು ರವಿ.
ಗೆಳೆತನವೆಂದರೆ
ಮೊಗದಲಿ ಒಂದು ಮಂದಹಾಸ
ಸುತ್ತಲೂ ಆವರಿಸುತ್ತದೆ
ನವೋಲ್ಲಾಸ
ಮುಚ್ಚಿಟ್ಟ ಮಾತುಗಳ
ಬಿಚ್ಚಿಡುವ ತವಕ
ಹೊತ್ತ ಬಾರವೆಲ್ಲಾ
ಹಗುರಾಗಿಸುವ ಪುಳಕ
ಮತ್ತೆ ಮತ್ತೆ
ಮಾತಿನ ಚಕಮಕಿ
ಮದ್ಯೆ ಮದ್ಯೆ
ಹಾಸ್ಯ ಚಟಾಕಿ
ಬೇಕೆಂದೆ ತೋರುವ ಕೋಪ
ಕಳೆವುದೆಲ್ಲಾ ಮನಸಿನ ತಾಪ
ಇಲ್ಲಿ ಸೋಲಿಲ್ಲ ಗೆಲುವಿಲ್ಲ
ನಗೆಯ ಹೊನಲೆ ಸುತ್ತಲೆಲ್ಲಾ
ಬಂಗಾರಕ್ಕಿಂತಲೂ ಮಿಗಿಲು ಇಂತಾ ಗೆಳೆತನ
ಉಲ್ಲಾಸದ ಹೂಬನ ಸ್ನೇಹದ ಸಿಂಚನ
(ಚಿತ್ರ ಸೆಲೆ: maxpixel.net)