ಕವಿತೆ : ಬಿಸಿಲು

– ವೆಂಕಟೇಶ ಚಾಗಿ

ಏನಿದು ಬಿಸಿಲು
ಸುಡು ಸುಡು ಬಿಸಿಲು
ಸಾಕಿದು ಹಗಲು
ಬಿಸಿಲು ಬಿರು ಬಿಸಿಲು

ಆಗಸದಲ್ಲಿ ಮೋಡಗಳಿಲ್ಲ
ಗಾಳಿಬೀಸದೆ ನಿಂತಿದೆಯಲ್ಲ
ಬೆಳಗಾದರೆ ಬರಿ ಬಿಸಿಲು
ಎಲ್ಲಿಯೂ ಕಾಣದು ಪಸಲು

ಜನರು ಮಾತ್ರ ಮನೆಯೊಳಗೆ
ಬಿಸಿಲಿಗೆ ಕಾದಿದೆ ನಮ್ಮ ಇಳೆ
ಬೇಗನೆ ಬಾರೋ ಮಳೆರಾಯ
ಬಂದೆ ಬಿಡುವನು ಜವರಾಯ

ಗಿಡಗಳ ಬೆಳೆಸಲು ನಾವಿಂದು
ನೆರಳು ಸಿಗುವುದು ನಮಗೆಂದೂ
ಕಾಡು ಇದ್ದರೆ ನಮ್ಮಯ ನಾಡು
ಕಾಡು ಇರದಿರೆ ಬದುಕೆ ಬರಡು

ಬನ್ನಿ ಪರಿಸರ ಉಳಿಸೋಣ
ನೆಮ್ಮದಿಯಾಗಿ ಬದುಕೋಣ
ಮುಂದಿನ ಪೀಳಿಗೆ ಬದುಕಲಿ
ಮಾನವ ಜನ್ಮ ಉಳಿಯಲಿ

( ಚಿತ್ರ ಸೆಲೆ: unslpash.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ಸೂಪರ್ 👏👏💐💐ಕವಿತೆ

ಅನಿಸಿಕೆ ಬರೆಯಿರಿ: