ಗಸಗಸೆ ಪಾಯಸ

– ಸವಿತಾ

ಗಸಗಸೆ ಪಾಯಸ

ಬೇಕಾಗುವ ಸಾಮಾನುಗಳು

 • ಗಸಗಸೆ – 6 ಚಮಚ
 • ಅಕ್ಕಿ – 3 ಚಮಚ
 • ಹಸಿ ಕೊಬ್ಬರಿ ತುರಿ –  4 ಚಮಚ
 • ಏಲಕ್ಕಿ – 2
 • ಲವಂಗ – 2
 • ಬಾದಾಮಿ – 2
 • ಗೋಡಂಬಿ – 6
 • ಒಣದ್ರಾಕ್ಶಿ – 10
 • ಬೆಲ್ಲದ ಪುಡಿ –  6-8 ಚಮಚ
 • ಕಾಯಿಸಿದ ಹಾಲು – 1 ಲೋಟ
 • ಕೇಸರಿ ದಳಗಳು – 2-3
 • ತುಪ್ಪ – 3 ಚಮಚ

ಮಾಡುವ ಬಗೆ

ಮೊದಲಿಗೆ ಬಾಣಲಿಯಲ್ಲಿ ಗಸಗಸೆ ಹುರಿದು ತೆಗೆದಿಟ್ಟುಕೊಳ್ಳಬೇಕು. ಅಕ್ಕಿ ಹುರಿದುಕೊಂಡು, ನಂತರ ಅದು ಆರಿದ ಮೇಲೆ ಇವೆರಡನ್ನೂ ಸೇರಿಸಿ ನೆನೆ ಹಾಕಬೇಕು . ಎರಡು ಗಂಟೆ ಕಾಲ ನೆನೆದರೂ ಸಹ ಸಾಕಾಗುತ್ತದೆ. ಕಾಯಿಸಿದ ಹಾಲಿನಲ್ಲಿ ಕೇಸರಿ ದಳ ನೆನೆ ಹಾಕಿ ಇಡಬೇಕು . ಹಸಿ ಕೊಬ್ಬರಿ ತುರಿ,ಅಕ್ಕಿ ಮತ್ತು ಗಸಗಸೆ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು. ಈಗ ಇದಕ್ಕೆ ಸ್ವಲ್ಪ ನೀರು ಸೇರಿಸಿ ತೊಳೆದು (ಅರ‍್ದ ಲೋಟ ನೀರು) ಒಂದು ಪಾತ್ರೆಗೆ ಹಾಕಿಕೊಂಡು ಒಂದು ಕುದಿ ಕುದಿಸಬೇಕು. ಆಮೇಲೆ ಕೇಸರಿ ದಳ, ಹಾಲು ಮತ್ತು ಬೆಲ್ಲದ ಪುಡಿ ಸೇರಿಸಿ ಚೆನ್ನಾಗಿ ಕುದಿಸಿಬೇಕು ಜೊತೆಗೆ ಏಲಕ್ಕಿ ಲವಂಗ ಪುಡಿ ಮಾಡಿ ಹಾಕಿಕೊಳ್ಳಬೇಕು. ತುಪ್ಪದಲ್ಲಿ ಗೋಡಂಬಿ, ಬಾದಾಮಿ ಚೂರುಗಳು ಮತ್ತು ಒಣ ದ್ರಾಕ್ಶಿ ಸ್ವಲ್ಪ ಹುರಿದು ಹಾಕಿ, ತಿರುಗಿಸಿ ಉಣಬಡಿಸಿ. ಈಗ ಗಸಗಸೆ ಪಾಯಸ ಸವಿಯಲು ಸಿದ್ದವಾಗಿದೆ.

 

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: