ಮಾವಿನ ಕಾಯಿಯ ಗುಳಂಬ

– ವಿಜಯಮಹಾಂತೇಶ ಮುಜಗೊಂಡ.

ಬೇಕಾಗುವ ಸಾಮಾನುಗಳು

  • ಮಾವಿನ ಕಾಯಿ – 2
  • ಬೆಲ್ಲ – 1 ಬಟ್ಟಲು
  • ಏಲಕ್ಕಿ – 2

ಮಾಡುವ ಬಗೆ

ಮಾವಿನ ಕಾಯಿಯ ಸಿಪ್ಪೆ ತೆಗೆದು ಸಣ್ಣಗೆ ತುರಿದು ಇಟ್ಟುಕೊಳ್ಳಿ. ಏಲಕ್ಕಿ ಮತ್ತು ಬೆಲ್ಲವನ್ನು ಬೇರೆ ಬೇರೆಯಾಗಿ ಜಜ್ಜಿ ಪುಡಿ ಮಾಡಿಟ್ಟುಕೊಳ್ಳಿ.

ಕಡಿಮೆ ಉರಿಯಲ್ಲಿ ಬಾಣಲೆ ಬಿಸಿ ಮಾಡಿ ಮಾವಿನ ಕಾಯಿಯ ತುರಿ ಮತ್ತು ಬೆಲ್ಲದ ಪುಡಿ ಸೇರಿಸಿ. ಪಾತ್ರೆಯ ತಳಕ್ಕೆ ಅಂಟದಂತೆ ಆಗಾಗ ಸೌಟಿನಿಂದ ತಿರುವುತ್ತಿರಿ. ಸ್ವಲ್ಪ ಹೊತ್ತಿನ ಬಳಿಕ ರಸ ಬಿಡಲು ಶುರುವಾಗುತ್ತದೆ. ಹಾಗೆಯೇ ಬಿಸಿ ಮಾಡುವುದನ್ನು ಮುಂದುವರೆಸಿ. ಬರುಬರುತ್ತಾ ನೀರು ಹೀರಿಕೊಂಡು ಅಂಟು ಅಂಟಾಗತೊಡಗುತ್ತದೆ. ನೀರು ಆರಿದ ಮೇಲೆ ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಕಲಸಿ, ಆರಲು ಬಿಡಿ.

ತಣ್ಣಗಾದ ಬಳಿಕ ಪೂರಿ, ಚಪಾತಿ ಇಲ್ಲವೇ ಅನ್ನದೊಂದಿಗೆ ಸವಿಯಬಹುದು. ತಂಪೆಟ್ಟಿಗೆಯಲ್ಲಿ ಇಟ್ಟುಕೊಂಡರೆ ಹಲವು ವಾರಗಳ ತನಕ ತಿನ್ನಲು ಚೆನ್ನಾಗಿರುತ್ತದೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: