ಕವಿತೆ: ಜರ್‍ಜರಿತ
ಸುತ್ತಿ ಸುತ್ತಿ ದುಂಡಗಾದ ಚಕ್ರ
ಏಗಿ ಏಗಿ ಸವೆದು ಮುಕ್ಕಾದ ಚಕ್ರ
ಬಣ್ಣ ಬಳಿದುಕೊಂಡು
ಪೋಟೋಕೆ ಪಕ್ಕಾದರು
ಉರುಳಿ ದುಡಿಯುವಾಗಿನ
ಬೆಲೆ ಈಗಿರಲು ಸಾದ್ಯವೇ?
ಬೆಟ್ಟ ಹತ್ತಿ ಬೆಟ್ಟ ಇಳಿದು
ಕೊರಕಲು ಸುತ್ತಿ ಇಳಿಜಾರಿನಲಿ ಜಾರಿ
ಹಳ್ಳಕೊಳ್ಳ ದಾಟಿ ಕಲ್ಲು ಮುಳ್ಳು ಮೆಟ್ಟಿ
ಮುನ್ನುಗ್ಗುವಾಗಿನ ಚಾತಿ
ಬಣ್ಣ ಬಳಿದುಕೊಂಡ ಬಾವ ಚಿತ್ರಕೆ
ಕಟ್ಟು ಹಾಕಿಸಿಕೊಂಡು ಗೋಡೆಗೆ ನೇತು ಬಿದ್ದಾಗ ಇಲ್ಲ?
ತಿರುಗುವಾಗಿನ ಶೌರ‍್ಯ ಮೂಲೆ
ಸೇರಿದಾಗ ನೆನೆದು ಬಣ್ಣಿಸುವರು ಯಾರು?
ಓಡುವಾಗ ಎಲ್ಲರೂ ನೆಂಟರೇ
ಓಡುವಾಗ ಬಣ್ಣಿಸಿದ ಬಾಯಿ
ಸವೆದು ಮೂಲೆ ಸೇರಿದಾಗ ಬಣ್ಣಿಸಿಯಾರೇ?
ಸವೆದು ಮುಕ್ಕಾದರೂ ಮತ್ತೂ
ಬಣ್ಣ ಬಳಿದು ನಮ್ಮನ್ನು ಜೋತು ಬಿದ್ದು
ಮೇಲೆ ಹತ್ತುವವರೆ ಎಲ್ಲಿಯವರೆಗೆ
ಎಂದರೆ ನಾವು ಹರಿದು ಮೂರಾಬಟ್ಟೆಯಾಗಿ
ಮಣ್ಣಲ್ಲಿ ಮಣ್ಣಾಗುವವರೆಗೂ
ಮಣ್ಣಾಗಿ ಇಲ್ಲವಾಗುವವರೆಗೂ?
( ಚಿತ್ರ ಸೆಲೆ: en.wikipedia.org )
ಇತ್ತೀಚಿನ ಅನಿಸಿಕೆಗಳು