ಕವಿತೆ: ಗಡಿಗಳ ದಾಟಿ

– ನೌಶಾದ್ ಅಲಿ ಎ. ಎಸ್.

ಒಲವು, Love

ಗಡಿಗಳ ದಾಟಿ
ಗಾಳಿ ಬೀಸಿದೆ
ಮೋಡ ಚಲಿಸಿದೆ
ಸುಗಂದ ಹರಡಿದೆ
ಪ್ರೀತಿಗೇಕೆ ಗಡಿಯ ಬಂದನ

ದರ‍್ಮದೆಲ್ಲೆ ಮೀರಿ
ಬಾಶೆ ಬೇಲಿ ದಾಟಿ
ಹ್ರುದಯ ತಂತಿ ಮೀಟಿ
ಪ್ರೀತಿ ಹಾಡಿದೆ

ಪ್ರೀತಿ ಕಟ್ಟಿ ಹಾಕಲು
ಹಲವರು ಹಲವು ವೇಶ ತೊಟ್ಟಿರುವರು
ದರ‍್ಮ, ಕಾನೂನಿನ ಅಸ್ತ್ರ ತೋರುತಿಹರು

ಪ್ರೀತಿ ಮುಂದೆ
ದ್ವೇಶವೇನೂ ಮಾಡಲಾರದು
ಹೆಚ್ಚೆಂದರೆ
ಜೀವ ಕೊಲ್ಲಬಹುದೇನೋ
ಪ್ರೀತಿಯ ಬಾವ ಕೊಲ್ಲಲಾದೀತೆ

ಹ್ರುದಯಗಳ ಗಾಯ ಮಾಯಲು
ಗಡಿಗಳ ಆತಂಕ ದೂರವಾಗಲು
ಪ್ರೀತಿ ಅಪ್ಪಿಕೊಳ್ಳಬೇಕಿದೆ
ಪ್ರೀತಿ ಮಾಡಬೇಕಿದೆ.

(ಚಿತ್ರ ಸೆಲೆ: pxhere.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: