ಮಾಡಿ ನೋಡಿ ಕೋಳಿ ಕಬಾಬ್
ಏನೇನು ಬೇಕು
- ಕೋಳಿ ಮಾಂಸ – ½ ಕೆ.ಜಿ
- ಕಬಾಬ್ ಪುಡಿ – 1 ಸಣ್ಣ ಪೊಟ್ಟಣ
- ಮೊಟ್ಟೆ – 1
- ಒಣ ಮೆಣಸಿನಕಾಯಿ ಪುಡಿ
- ಅರಿಶಿಣದ ಪುಡಿ
- ಶುಂಟಿ ಬೆಳ್ಳುಳಿ ಪೇಸ್ಟ್
- ಕರಿಯಲು ಅಡುಗೆ ಎಣ್ಣೆ
ಮಾಡುವ ಬಗೆ
½ ಚಮಚ ಅರಿಶಿಣದ ಪುಡಿ ಹಾಕಿಕೊಂಡು ಕೋಳಿ ಬಾಡನ್ನು ತೊಳೆದಿಟ್ಟುಕೊಳ್ಳಿ. ಒಂದು ಪಾತ್ರೆಗೆ ಕಬಾಬ್ ಪುಡಿ, 2 ಚಮಚ ಶುಂಟಿ ಬೆಳ್ಳುಳಿ ಪೇಸ್ಟ್, ½ ಚಮಚ ಒಣ ಮೆಣಸಿನಕಾಯಿ ಪುಡಿ ಹಾಕಿ, ಇದಕ್ಕೆ ಹಸಿ ಮೊಟ್ಟೆ ಒಡೆದು ಹಾಕಿ ಚೆನ್ನಾಗಿ ಕಲಸಿಟ್ಟುಕೊಳ್ಳಿ. ಸ್ವಲ್ಪ ಹೊತ್ತು ಬಿಟ್ಟು ತೊಳೆದಿಟ್ಟಿರುವ ಕೋಳಿ ಬಾಡನ್ನು ಇದಕ್ಕೆ ಸೇರಿಸಿ ಚೆನ್ನಾಗಿ ಕಲಸಿ, 2 ಗಂಟೆ ನೆನೆಯಲು ಬಿಡಿ.
ಒಂದು ಬಾಣಲೆಗೆ ಅಡುಗೆ ಎಣ್ಣೆ ಸೇರಿಸಿ ಎಣ್ಣೆಯನ್ನು ಕುದಿಸಿ. ನೆನೆಸಿಟ್ಟ ಕೋಳಿ ಬಾಡನ್ನು ಎಣ್ಣೆಗೆ ಹಾಕಿ ಚೆನ್ನಾಗಿ ಕರಿಯಿರಿ. ಈಗ ಗರಿಗರಿಯಾದ ಕೋಳಿ ಕಬಾಬ್ ಸವಿಯಲು ರೆಡಿ.
ಇತ್ತೀಚಿನ ಅನಿಸಿಕೆಗಳು