ಕವಿತೆ: ತ್ಯಾಗ

– ಶ್ಯಾಮಲಶ್ರೀ.ಕೆ.ಎಸ್.ಒಬ್ಬಂಟಿ, Loneliness

ಬದುಕಿನ ಕೋಟೆ ಬೇದಿಸಿ ನೋಡು
ಇರುವುದಿಲ್ಲಿ ಬರೀ ತ್ಯಾಗ

ತಾಳ್ಮೆಗೂ ದೈರ‍್ಯಕೂ ಪ್ರೀತಿಗೂ
ಮೀರಿಹುದು ಈ ತ್ಯಾಗ

ತನ್ನೊಡಲ ಕೂಸನು ಜಗಕೆ ತರಲು
ತಾಯಿಯ ಪರಮ ತ್ಯಾಗ

ತನ್ನ ಮಕ್ಕಳ ಒಳಿತಿಗಾಗಿ
ತಂದೆಯ ಸುಕದ ತ್ಯಾಗ

ತವರು ತೊರೆದು ಇನ್ನೊಂದು ಮನೆಯಲಿ
ಬಾಳಿ ಬೆಳಗುವ ಪ್ರತೀ ಹೆಣ್ಣಿನ ತ್ಯಾಗ

ಒಲವಿಗಾಗಿ ಒಲವಿನ ಪರಿತ್ಯಾಗ
ಪ್ರತಿ ನಗುವಿನ ಹಿಂದೆ ನೋವಿನ ತ್ಯಾಗ

ಬೂಮಿಯ ರುಣ ತೀರಿದ ಮೇಲೆ
ಎಲ್ಲವ ತ್ಯಜಿಸಿ ಕಟ್ಟ ಕಡೆಗೆ ದೇಹತ್ಯಾಗ

(ಚಿತ್ರಸೆಲೆ: home.bt.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: