ಕವಿತೆ: ನಮ್ಮ ಹೆಮ್ಮೆಯ ನಾಡು
ಕರುನಾಡು ನಮ್ಮ ಹೆಮ್ಮೆಯ ನಾಡು
ಕನ್ನಡಿಗರ ನಲ್ಮೆಯ ನೆಲೆವೀಡು
ಕನ್ನಡಾಂಬೆಯ ಒಲವಿನ ಗುಡಿಯು
ಕನ್ನಡವೇ ನಮ್ಮ ತಾಯ್ನುಡಿಯು
ನುಡಿಯಲೆಂತು ಎನಿತು ಹಿತವೊ
ಕೇಳಲೆಂತು ಅತೀ ಮದುರವೊ
ಎಂದಿಗೂ ಮೊಳಗಲೆಮ್ಮ ಕನ್ನಡ
ಎಂದೆಂದಿಗೂ ಬೆಳಗಲೆಮ್ಮ ಕನ್ನಡ
ಸಿರಿಗಂದದ ನಾಡು ನಮ್ಮ ಕನ್ನಡನಾಡು
ಕೆಚ್ಚೆದೆಯ ವೀರಕನ್ನಡಿಗರ ಗೂಡು
ಸಾಹಿತ್ಯ ಪರಂಪರೆಯ ಸುರಲೋಕವಿದು
ಹಸಿರು ಹಸಿರಿನ ಬನಸಿರಿಯ ಸಗ್ಗವಿದು
ನದಿ ಸಾಗರ ಶಿಕರಗಳ ತವರೂರಿದು
ನೋಡಲೆಂತು ಸೊಗಸು ಸುಂದರವೊ
ಬದುಕಲೆಂತು ರಮ್ಯ ತಾಣವೊ
ಹೊನ್ನ ಕನ್ನಡ, ಚೆಲುವ ಕನ್ನಡ
ಇಂಪು ಕಂಪಿನ ಕನ್ನಡ, ಕಸ್ತೂರಿ ಕನ್ನಡ
ಮತ್ತೆ ಬಂದಿದೆ ನಮ್ಮ ಕನ್ನಡದ ಹಬ್ಬ
ಕನ್ನಡದ ಹಿರಿಮೆ ಗರಿಮೆ ಸಾರುವ ನಾಡ ಹಬ್ಬ
ಕನ್ನಡ ನಾಡು ನುಡಿಯ ಕೀರುತಿ ಹರಡಲಿ
ಸಿರಿಗನ್ನಡಕೆ ಜಯವಾಗಲಿ
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
(ಚಿತ್ರ ಸೆಲೆ: wikimedia.org )
ಇತ್ತೀಚಿನ ಅನಿಸಿಕೆಗಳು