ಹನಿಗವನಗಳು

– ವೆಂಕಟೇಶ ಚಾಗಿ.

*** ಸೂತ್ರ ***

ಎಲ್ಲಾ ಸಮಸ್ಯೆಗಳಿಗೂ
ಪರಿಹಾರಗಳಿವೆ
ಹುಡುಕಬೇಕಶ್ಟೇ
ಸರಿಯಾದ ಸೂತ್ರ
ಏನೇ ಇರಲಿ ಹೇಗೆ ಇರಲಿ
ಜೊತೆಯಲ್ಲಿ ಇರಬೇಕು
ಸರಿಯಾದ ಮಿತ್ರ

*** ಆಣೆ ಪ್ರಮಾಣ ***

ಚಿಕ್ಕ ವಯಸ್ಸಿನಲ್ಲಿದ್ದಾಗ
ದೇವರ ಎದುರಲ್ಲಿ ಮಾಡಿದ್ದೆ
ಸುಮ್ಮನೆ ಆಣೆ ಪ್ರಮಾಣ
ಇತ್ತೀಚಿಗೆ ಯಾರೂ ನಂಬುತ್ತಿಲ್ಲ
ಏರುತ್ತಲೇ ಇದೆ
ಆಣೆಗಳ ಪ್ರಮಾಣ

*** ಮನೆ ***

ಮನೆ ಕಟ್ಟಬೇಕೆ
ಎಲ್ಲ ಕೊಟ್ಟ
ದೇವರಿಗೆ
ಕಟ್ಟುವ ಕೆಡವುವ ತವಕ
ಸತ್ಯ ಅರಿಯದ
ಮಾನವರಿಗೆ

*** ಇರುವೆ ***

ಏನು ಶಿಸ್ತು
ಎಂತಹ ಶ್ರದ್ದೆ
ಬುವಿಯ ಶ್ರಮಜೀವಿ
ಇರುವೆ
ನಿಂತ ಜಾಗದಲ್ಲಿ
ಕಾಲಿಗೆ ಕಚ್ಚಿ ಹೇಳಿತು
ನೋಡಿ ನಡೆ
ನಾನೂ ಇಲ್ಲಿರುವೆ

*** ನಗು ***

ವಯಸ್ಸಾದಂತೆ
ನಗು ಕಡಿಮೆಯಾಗಿ
ಮುಕಕ್ಕೆ ಇಲ್ಲವಾಯ್ತು
ಎಕ್ಸರ್ ಸೈಜು
ಇದ್ದರೇನು ಬಂತು
ಎಶ್ಟೇ ವೈಜು
ಕಡಿಮೆಯಾಗುತ್ತಿದೆ
ಏಜಿನ ಸೈಜು

(ಚಿತ್ರ ಸೆಲೆ: ecosalon.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: