ಕವಿತೆ: ಲಿಪಿಗಳ ರಾಣಿ ಕನ್ನಡ

– ಶಶಿಕುಮಾರ್ ಡಿ ಜೆ.

kannada, karnataka, ಕನ್ನಡ, ಕರ‍್ನಾಟಕ

ಅಂಕು ಡೊಂಕು
ಬಾರ ವೈಯ್ಯಾರ
ಸಾರ ಮನಸಾರ
ಶ್ರುಂಗಾರದಿ
ರೂಪುಗೊಂಡಿರುವೆ

ನುಡಿಯಲು ಮುತ್ತು ಸುರಿದಂತೆ
ಕೇಳಲು ತಂಪು ಸುಳಿದಂತೆ
ನೋಡಲು ಇರುಳ ಶಶಿಯಂತೆ

ಲಿಪಿಗಳ ರಾಣಿ ನೀನು
ದೀಮಂತದ ಕಿರೀಟ ನೀನು
ಸ್ವಂತಿಕೆಗೆ ಅನಂತ ನೀನು

ನೀ ಇಟ್ಟ ಹೆಜ್ಜೆಗಳು ಅದು ಇತಿಹಾಸ
ನೀ ತೆರದ ಪುಟಗಳು ಗತವೈಬವ
ನೀ ಸಂಚರಿಸು ಅನಂತದಲ್ಲಿ
ನೀ ಅಲಂಕರಿಸುವೆ ಕನ್ನಡಿಗರ ಹ್ರುದಯದಲ್ಲಿ

(ಚಿತ್ರ ಸೆಲೆ: starofmysore.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: