ಹೆಸರು ಕಾಳು ದೋಸೆ (ಪೆಸರಟ್ಟು)

– ಶ್ಯಾಮಲಶ್ರೀ.ಕೆ.ಎಸ್.

ಬೇಕಾಗುವ ಸಾಮಗ್ರಿಗಳು

ಹೆಸರುಕಾಳು – 1 ಬಟ್ಟಲು
ಕಡಲೆಬೇಳೆ – 2 ಟೇಬಲ್ ಚಮಚ
ಮೆಂತ್ಯ – ½ ಟೀ ಚಮಚ
ಅಕ್ಕಿ ಹಿಟ್ಟು – ¼ ಬಟ್ಟಲು
ಹಸಿ ಮೆಣಸಿನ ಕಾಯಿ – 5 ರಿಂದ 6
ಹಸಿ ಶುಂಟಿ – ½ ಇಂಚು
ಜೀರಿಗೆ – 1 ಟೀ ಚಮಚ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಉಪ್ಪು – ರುಚಿಗೆ ತಕ್ಕಶ್ಟು
ಎಣ್ಣೆ – ಸ್ವಲ್ಪ

ಮಾಡುವ ಬಗೆ

ಒಂದು ಪಾತ್ರೆಗೆ ಹೆಸರು ಕಾಳು, ಕಡಲೆಬೇಳೆ, ಮೆಂತ್ಯ ಹಾಕಿ, ನೀರು ಸೇರಿಸಿ ರಾತ್ರಿ ಪೂರ ನೆನೆಯಲು ಬಿಡಿ. ನಂತರ ಮಿಕ್ಸಿ ಜಾರ್ ನಲ್ಲಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಟ್ಟುಕೊಳ್ಳಿ. ಹಸಿ ಮೆಣಸಿನ ಕಾಯಿ, ಶುಂಟಿ, ಜೀರಿಗೆ, ಕೊತ್ತಂಬರಿ ಸೊಪ್ಪು ಸೇರಿಸಿ ಮಿಕ್ಸರ್ ನಲ್ಲಿ ಪೇಸ್ಟ್ ಮಾಡಿ ಮೊದಲೇ ರುಬ್ಬಿಟ್ಟಿದ್ದ ಹೆಸರು ಕಾಳು ಹಿಟ್ಟಿನ ಜೊತೆ ಸೇರಿಸಿ, ಅಕ್ಕಿ ಹಿಟ್ಟನ್ನು ಸಹ ಸೇರಿಸಿ, ರುಚಿಗೆ ತಕ್ಕಶ್ಟು ಉಪ್ಪು ಹಾಕಿ ಮಿಶ್ರಣ ಮಾಡಿ. ಎಣ್ಣೆ ಸವರಿದ ಬಿಸಿ ತವೆ ಮೇಲೆ ಗರಿ ಗರಿಯಾದ ಆರೋಗ್ಯಕರವಾದ ಹೆಸರು ಕಾಳು ದೋಸೆಯನ್ನು ಮಾಡಿ, ಕಾಯಿಚಟ್ನಿ, ಶೇಂಗಾ ಚಟ್ನಿಯೊಂದಿಗೆ ಸವಿಯಬಹುದು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: