ಹನಿಗವನಗಳು

– ಕಿಶೋರ್ ಕುಮಾರ್.

***ಹೋರಾಟ***

ಬದುಕೇ ಒಂದು ಹೋರಾಟ
ಪ್ರತಿದಿನವೂ ಇಲ್ಲಿ ಜಂಜಾಟ
ಹೋರಾಟದಲ್ಲೂ ಸಂತಸವಿದೆ
ಆ ಸಂತಸ ಹುಡುಕಿ, ಅಲ್ಲಿ ನಲಿವಿದೆ

 

***ಮರೆಯದಿರು***

ಮರೆಯದಿರುವ ನಮಗಾಗಿ ಇದ್ದವರ
ಬೆನ್ನೆಲುಬಾಗುವ ನಮ್ಮ ನಂಬಿ ಬಂದವರ
ಜೊತೆ ನಿಲ್ಲುವ ನಮಗಾಗಿ ಬದುಕಿದವರ
ಎಂದೆಂದಿಗೂ ನೆನೆಯುವ ಹರಸಿ ಹೆಮ್ಮೆಪಟ್ಟವರ

 

***ಸೋಲು***

ಸೋಲು ಇರದ ಬಾಳು ಉಂಟೇನು
ಇದ್ದರೂ ಅದು ಎಲ್ಲರಿಗೂ ಸಮವೇನು
ಸೋಲೆ ಗೆಲುವಿನ ಮೆಟ್ಟಿಲು ಗೊತ್ತೇನು
ಗೊತ್ತಿದ್ದರೂ ಮತ್ತೆ ಪ್ರಯತ್ನಿಸಲು ತೊಡಕೇನು

 

***ಕೋಪ***

ಮುಂಗೋಪವು ಬರಬಹುದು ರಬಸದಿಂದ
ಆ ಕೋಪದ ತಾಪವ ಅಳೆಯಲಾದೀತೇ
ಅದರಿಂದಾದ ನೋವ ಮರೆಮಾಚಲಾದೀತೆ
ಆ ಕೋಪವನ್ನೇ ತಡೆದು ಮುನ್ನುಗ್ಗುಬಾರದೇಕೆ.

(ಚಿತ್ರ ಸೆಲೆ: ecosalon.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications