ಹಕ್ಕಿಯೊಂದರ ಹಾಡು
– ಅಂಕುಶ್ ಬಿ.
ಎಲ್ಲೆಲ್ಲೂ ಕಾಂಕ್ರೀಟ್ ಕಾಡು
ನಮಗಿಲ್ಲ ಒಂದು ಗೂಡು!
ಎಲ್ಲೆಲ್ಲೂ ದೂಳು ಹೊಗೆ
ನಾವಿನ್ನು ಬದುಕೋದು ಹೇಗೆ?
ತಿನ್ನಲು ಒಂದು ಕಾಳಿಲ್ಲ
ಕುಡಿಯಲು ತೊಟ್ಟು ನೀರಿಲ್ಲ
ಮಳೆಯಿಲ್ಲ, ಬೆಳೆಯಿಲ್ಲ
ಬಿಸಿಲಿನ ಬೇಗೆ ತಾಳೆನಲ್ಲ
ಕಾಳು ಕಾಳಿಗು ಅಲೆದಾಟ
ಜೀವಜಲಕೆ ಹುಡುಕಾಟ
ಮರ ಕಡಿವುದು ನಿಮಗೆ ಹುಡುಗಾಟ
ಕೇಳುವವರಿಲ್ಲ ನಮ್ಮ ಪರದಾಟ
ಎಲ್ಲೆಲ್ಲೂ ವಿಶಗಾಳಿಯಣ್ಣ
ನಿಮಗಿಲ್ಲ ನಮ್ಮಬಗ್ಗೆ ಕರುಣ
ಗುಟುಕು ಜೀವ ಹಿಡಿದಿಹೆವಣ್ಣ
ನಮ್ಮಯ ಮರಗಳ ಉಳಿಸಣ್ಣ
ಹಸಿರೇ ಉಸಿರು ಕೇಳಣ್ಣ
ಗಿಡಮರಗಳನು ಬೆಳೆಸಣ್ಣ
ಜೀವಜಲವ ರಕ್ಶಿಸಣ್ಣ
ಸ್ವಚ್ಚ ಪರಿಸರ ಉಳಿಸಣ್ಣ
( ಚಿತ್ರಸೆಲೆ: theguardian.com )
ಇತ್ತೀಚಿನ ಅನಿಸಿಕೆಗಳು