ಪರಮ ಅಂತ್ಯದ ಕತೆ ಪೇಳ್ವೆನು ಅಣ್ಣಾ..

– ಕೌಸಲ್ಯ.

kodagu

ಜೀವ ಜಗದೊಳಗಣ
ಪರಮ ಅಂತ್ಯದ ಕತೆ ಪೇಳ್ವೆನು ಅಣ್ಣಾ..

ಸಪ್ತ ಸುತ್ತಿನ ಕೋಟೆಯಂತೆ
ಪಸರಿಸಿಹುದು ಮಲೆಗಳಿರ‍್ಪ ಕೊಡಗುಮಲೆ
ಪೆರಿಯ ಪೆಸರಿಹುದು ವಟುರಾಶಿಗಳಿರ‍್ಪ ನಾಡ್ಗೆ ದಕ್ಶಿಣ ಕಾಶ್ಮೀರ
ಆಶ್ರಯವಂ ಇತ್ತಿಹುದು ಪೋರನಾಟಿನವರ‍್ಗೆ

ಕಗಮಿಗ – ಜಲಚರ ಸಂಸಾರಗಳ್ಗೆ
ಮದಕರಿ ವ್ಯಾಗ್ರನಿರ‍್ಪ ಪೋದೆ
ಪಶ್ಚಿಮ ಗಟ್ಟದ ಕೊಡಗುಮಲೆ

ಕೇಳ್ …ಜನಪರ ಪೋರಾಟವಂ ಮಾಳ್ಪ ಕರುಳ್
ದೂರ‍್ತ ಮನುಜಂಗೆ ಬೇಕೆನಿಸಿಹುದು ಉಗಿಬಂಡಿಯು
ಸಂದೇಶವಂ ಪೋತ್ತು ಸಾಗಿಹುದು ರಹಸ್ಯ ಓಲೆ

ಅದರೊಳಗಣ ಸಾರ ಏಕಮಾತ್ರಂ
ಉಗಿಬಂಡಿ ಸಾಗುವುದು ಮಲೆಯೊಳಿಂದಮಾ…
ಹನನವಾಗ್ಪುದು ಅಲ್ಗೆ ಸಹಸ್ರವಟುಬೀಜಗಳ್
ನಿರ‍್ನಾಮವಾಗ್ಪುದು ಉತ್ಕ್ರುಶ್ಟ ವನ್ಯರಾಶಿಗಳ್

ಮಳಯಾಳಿ ದೇಶದೊಳಕ್ಕೆ ಪಾಯ್ದ
ವಿದ್ಯಚ್ಚಕ್ತಿಯೊಳ್ ನಿರ‍್ನಾಮವಾಗಿಹುದು ವ್ರುಕ್ಶಸಂಪತ್ತು
ಕರುಳ ಕುಡಿಗಳ ಆಕ್ರಂದನ ಕೇಳ್ಪವರಿಲ್ಲ

ವರುಣ ದೇವಂಗೆ ಮುನಿಸಿಹುದು
ಕ್ಶಮಾಪಣೆ ಎಮಗಿಲ್ಲವೆನ್ ಪೇಳ್ತಿರುವನ್
ನೈಜತೆಯ ಚಿತ್ರಣವಂ ಸಾರಿಹುದು
ದರೆಯೋಳ್ ಸುಡುತಿಹ ಶಾಕವು

ಜಲದ ನೆಲೆಯಿಲ್ಲದೆ ಬರಡಾಗಿಹುದು ದರಣಿ
ದಿಕ್ಕೆಟ್ಟು ಕಂಗಾಲಾಗಿ ನಾಡ್ಗೆ ಅಡಿಯಿಡುತಿಹುದು ಮದಕರಿ
ಪೇರಾಸೆಯ ಉಗಿಬಂಡಿ ಅಟವಿಯೋಳ್ ಪೋಕ್ಕರಲ್ಗೆ

ಜೀವಿಗಳ ಮಾರಣಹೋಮ ಶತಸಿದ್ದವು
ಕಳಚಿ ಪೋಗುವಲ್ಗೆ ಜೀವಜಗದ ಕೊಂಡಿಯು
ಪರಮ ಅಂತ್ಯದ ನಾಂದಿಯು…!

(ಚಿತ್ರಸೆಲೆ: kannada.webdunia.com )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.