ನಿನ್ನ ಮರೆಯಲಿ ಹೇಗೆ?

– ಪ್ರತಿಬಾ ಶ್ರೀನಿವಾಸ್.

kanneeru1
ಮರೆಯಲೇಬೇಕೆಂದು ನೆನಪಿಸಿಕೊಳ್ಳುವೆ
ಪದೇ ಪದೇ ನಿನ್ನನ್ನೇ
ನೀ ಮರೆತು ಹೋಗದೆ ಮತ್ತೆ ಮರುಕಳಿಸಿದೆ
ಈ ನನ್ನ ಕಣ್ಣಲ್ಲೇ

ಈ ನನ್ನ ಬುದ್ದಿಗೆ ಮಂಕು ಬಡೆದಿದೆ
ಒದ್ದು ಹೋದ ನಿನ್ನ ಮುದ್ದಿಸುತ್ತಿರುವೆ
ಅಲ್ಲೆಲ್ಲೊ ಕೇಳುವ ನಿನ್ನ ದನಿಗೆ
ಇಲ್ಲಿ ಹ್ರುದಯ ಕಂಪಿಸಿದೆ
ನೀ ಕೂಗುವ ಬೇರೆ ಹೆಸರು ಕೂಡ
ನನ್ನ ಹೆಸರಂತೆ ಕೇಳಿದೆ

ಹಿಂದೊಮ್ಮೆ ಒಂದಿಶ್ಟು ನಗುವ ತರಿಸಿದೆ
ನೀನು ಈ ನನ್ನ ತುಟಿಯಂಚಲ್ಲಿ
ಈಗೀಗ ತುಂಬಿ ತುಳುಕುತಿಹುದು
ಕಣ್ಣೀರ ಕಡಲು ನನ್ನೆದೆಯಾಳದಲಿ

ನೀ ಮೋಡದೊಳು ಅವಿತು
ಮೌನದಿ ಮಾಯವಾದೆ
ನೀ ಮಳೆಹನಿಯಾಗಿ ನನ್ನೊಡಲ ಸೇರುವೆ
ಎಂದು ನಾ ಕಾದು ಬಿಸಿಲಲ್ಲಿ ಒಣಗಿ ಹೋದೆ

ಈ ನನ್ನ ಕಣ್ಣನ್ನೊಮ್ಮೆ ದಿಟ್ಟಿಸಿ ನೋಡು
ನಿನ್ನ ನೆನಪುಗಳೆಲ್ಲಾ ಅದರೊಳಿಹುದು
ನೀ ಕೊಟ್ಟ ನೋವುಗಳು ಕಣ್ಣಿನಾಳದಿಂದ
ಒಂದೊಂದೆ ಬಿಂದುವಾಗಿ ನೆಲ ಮುಟ್ಟಿತು

ನಿನ್ನ ಮರೆಸುವ ನೀನು ಕೂಡ
ಬೇಡ ಎನಗೆ
ಹಾಗೆ ಮರೆಯುವುದಾದರೇ
ಸಾವೇ ಸಂಬವಿಸಲಿ ಎನಗೆ

( ಚಿತ್ರ ಸೆಲೆ:  abstract.desktopnexus.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ashoka p says:

    ಕವನ ಮಾರ್ಮಿಕವಾಗಿದೆ

ಅನಿಸಿಕೆ ಬರೆಯಿರಿ:

Enable Notifications