ಬಾರತದಲ್ಲಿ ಹುಟ್ಟಿ ನೋಬೆಲ್ ಪಡೆದವರು

 ವಿಜಯಮಹಾಂತೇಶ ಮುಜಗೊಂಡ.

large-nobel-chemistry-medal

ಸಣ್ಣವಯಸ್ಸಿನಲ್ಲಿಯೇ ಕೆಲಸದಲ್ಲಿ ತೊಡಗಿದ್ದ ಸುಮಾರು 80,000 ಮಕ್ಕಳು ಮತ್ತೆ ಬಾಲ್ಯವನ್ನು ಸವಿಯುವಂತೆ ಮಾಡಿದ ಕೈಲಾಶ್ ಸತ್ಯಾರ‍್ತಿ ನೋಬೆಲ್ ಪ್ರಶಸ್ತಿ ಪಡೆದಿದ್ದು ಇತ್ತೀಚಿನ ಸುದ್ದಿ. ಬಾರತದಲ್ಲಿ ಹುಟ್ಟಿ, ಜಗತ್ತಿನಲ್ಲಿಯೇ ಹೆಚ್ಚುಗಾರಿಕೆಯುಳ್ಳ ಈ ಬಿರುದು ಪಡೆದವರ ಕುರಿತು ತಿಳಿಯೋಣ.

2014: ಕೈಲಾಶ್ ಸತ್ಯಾರ‍್ತಿ

kailash-satyarthiಬಚಪನ್ ಬಚಾವೋ ಆಂದೋಲನ್‘ ಎನ್ನುವ ಸಂಸ್ತೆಯನ್ನು ಹುಟ್ಟುಹಾಕಿ, ಸಂಸ್ತೆಯ ಮೂಲಕ ಮಕ್ಕಳ ಹಕ್ಕುಗಳನ್ನು ಎತ್ತಿಹಿಡಿದು ಸುಮಾರು 84,000 ಮಕ್ಕಳನ್ನು ಸಾಕಿದವರು ಇವರು. ಚಿಕ್ಕವಯಸ್ಸಿನಲ್ಲಿಯೇ ಕೆಲಸಕ್ಕೆ ಸೇರುವ ಮಕ್ಕಳು ತಮ್ಮ ಬಾಲ್ಯವನ್ನು ಕಳೆದುಕೊಳ್ಳದಿರಲಿ ಎಂದು ಇವರು ನಡೆಸಿದ ಹೋರಾಟಕ್ಕಾಗಿ ಇವರಿಗೆ 2014ನೇ ಸಾಲಿನ ನೋಬೆಲ್ ಶಾಂತಿ ಬಹುಮಾನ ಸಂದಿದೆ.

2009: ವೆಂಕಟರಾಮನ್ ರಾಮಕ್ರಿಶ್ಣನ್

venkatraman-ramakrishnan1952ರಲ್ಲಿ ತಮಿಳುನಾಡಿನ ಚಿದಂಬರಂನಲ್ಲಿ ಹುಟ್ಟಿದ ವೆಂಕಟರಾಮನ್ ರಾಮಕ್ರಿಶ್ಣನ್ ಅವರು, 2009ನೇ ವರುಶದ ಇರ್‍ಪರಿಮೆಗಾಗಿ(Chemistry) ನೀಡಲಾಗುವ ನೋಬೆಲ್ಅನ್ನು ಪಡೆದಿದ್ದಾರೆ. ರೈಬೋಸೋಮ್‍ಗಳ ಜೋಡಣೆ ಮತ್ತು ಕೆಲಸದ ಕುರಿತು ಇವರು ನಡೆಸಿದ ಅರಕೆಗಾಗಿ ಇವರಿಗೆ ನೋಬೆಲ್ ಪ್ರಶಸ್ತಿ ಸಂದಿದೆ. ರೈಬೋಸೋಮ್‍ಗಳಿಗೆ ಅಂಟಿಕೊಂಡ ಹಲವು ಬಗೆಯ ಸೀರಳಿಕಗಳ(antibiotic) ಇಟ್ಟಳವನ್ನು(structure) ತೋರಿಸಲು ಇವರು 3D ಮಾದರಿಯನ್ನು ಮಾಡಿದ್ದರು.

1998: ಅಮಾರ್‍ತ್ಯ ಸೇನ್

amartya-senಪಶ್ಚಿಮ ಬಂಗಾಳದ ಶಾಂತಿನಿಕೇತನದಲ್ಲಿ 1933ರಲ್ಲಿ ಹುಟ್ಟಿದ ಅಮಾರ್‍ತ್ಯ ಸೇನ್ ಅವರಿಗೆ 1998ರಲ್ಲಿ ನೋಬೆಲ್ ಪ್ರಶಸ್ತಿಯನ್ನು ನೀಡಲಾಗಿತ್ತು. ಒಳಿತು ಸೊಮ್ಮರಿಮೆ(welfare economics) ವಿಶಯಲ್ಲಿ ಇವರು ಮಾಡಿದ ಕೆಲಸಕ್ಕಾಗಿ ಇವರಿಗೆ ನೋಬೆಲ್ ಪ್ರಶಸ್ತಿ ಸಿಕ್ಕಿದೆ.

1968: ಹರಗೋಬಿಂದ್ ಕೊರಾನಾ

har-gobind-khorana1922ರಲ್ಲಿ ಚತ್ತೀಸ್‍ಗಡದ ರಾಯಪುರದಲ್ಲಿ ಹುಟ್ಟಿದ ಹರಗೋಬಿಂದ್ ಕೊರಾನಾ, ಅಮೆರಿಕಾದ ವಿಸ್ಕನ್ಸಿನ್ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದಾಗ ನೋಬೆಲ್ ಪಡೆದಿದ್ದಾರೆ.  ಕಿರುಕೋಣೆಗಳಲ್ಲಿ(Cell) ಅಡಗಿರುವ ತಳಿಯರಿಮೆಯ(genetic) ಕೋಡ್‍ ಅನ್ನು ಬಿಡಿಸಿ, ಅದು ಪ್ರೋಟೀನ್ ಕೂಡಿಹಾಕುವಿಕೆಯನ್ನು ಹೇಗೆ ಹತೋಟಿಯಲ್ಲಿಡುತ್ತದೆ ಎನ್ನುವುದರ ಕುರಿತು  ವಿವರ ನೀಡಿದ್ದಕ್ಕಾಗಿ 1968ರಲ್ಲಿ ನೋಬೆಲ್ ಪಡೆದಿದ್ದರು.

1930: ಸರ್ ಸಿ. ವಿ. ರಾಮನ್

sir-c-v-ramanತಮಿಳುನಾಡಿನ ತಿರುಚಿನಾಪಳ್ಳಿಯಲ್ಲಿ 1888ರಲ್ಲಿ ಹುಟ್ಟಿದ ಸರ್ ಚಂದ್ರಶೇಕರ ವೆಂಕಟ ರಾಮನ್ ಅವರಿಗೆ 1930ರಲ್ಲಿ ನೋಬೆಲ್ ಪ್ರಶಸ್ತಿಯನ್ನು ನೀಡಲಾಗಿತ್ತು. ಅವರು ಪರಮಾಣುವಿನ ಇರುವರಿಮೆ(Physics) ಮತ್ತು ಮಿನ್ಸೆಳೆತನದ(electromagnetism) ಕುರಿತು ಅರಕೆ ನಡೆಸಿದ್ದರು. ಬೆಳಕಿನ ಕದಿರುಗಳ(rays) ಚದುರುವಿಕೆ ಕುರಿತ ಇವರ ಅರಕೆಯನ್ನು ಗುರುತಿಸಿ ಇವರಿಗೆ ನೋಬೆಲ್ ಪ್ರಶಸ್ತಿ ನೀಡಲಾಗಿದೆ, ಈ ಪರಿಣಾಮವನ್ನು ‘ರಾಮನ್ ಪರಿಣಾಮಗಳು’ ಎಂದೇ ಕರೆಯುತ್ತಾರೆ.

1913: ರಬೀಂದ್ರನಾತ್ ಟಾಗೂರ್

rabindranath-tagore1861ರಲ್ಲಿ ಕಲ್ಕತ್ತಾದಲ್ಲಿ ಹುಟ್ಟಿದ ರಬೀಂದ್ರನಾತರು ಮೊದಲು ಬೆಂಗಾಲಿಯಲ್ಲಿ ಬರೆಯುತ್ತಿದ್ದರು. ಮುಂದೆ ಇಂಗ್ಲೀಶಿನಲ್ಲಿ ಬರೆಯುವ ಮೂಲಕ ಪಡುವಣದೆಡೆಯ ಹೆಚ್ಚಿನ ಓದುಗರನ್ನು ತಲುಪಿದ ಇವರಿಗೆ ‘ಗೀತಾಂಜಲಿ’ ಕವಿತೆಗಳ ಕಂತೆಗೆ ನೋಬೆಲ್ ಬಹುಮಾನ ಸಿಕ್ಕಿದೆ.

1902: ರೊನಾಲ್ಡ್ ರಾಸ್

ronald-rossಇಂದಿನ ಉತ್ತರಾಕಂಡದಲ್ಲಿರುವ ಅಲ್ಮೋರಾ ಎಂಬಲ್ಲಿ ಹುಟ್ಟಿದ ರೊನಾಲ್ಡ್ ರಾಸ್ 1902ನೆಯ ವರುಶದ ನೋಬೆಲ್ ಪ್ರಶಸ್ತಿಯನ್ನು ಪಡೆದಿದ್ದರು. ಮಲೇರಿಯಾ ಬೇನೆಯ ಹರಡುವಿಕೆ ಮತ್ತು ಅದನ್ನು ತಡೆಯುವ ಬಗ್ಗೆ ಮೊಟ್ಟಮೊದಲು ಅರಕೆ ನಡೆಸಿದ್ದು ಇವರೇ.

 

 

* ಈ ಎಲ್ಲ ನೋಬೆಲ್ ಪುರಸ್ಕ್ರುತರು ಬಾರತದಲ್ಲಿ ಹುಟ್ಟಿದವರು ಎಂದು ಅದಿಕ್ರುತ ನೋಬೆಲ್ ಪ್ರಶಸ್ತಿಯ ಮಿಂದಾಣದಲ್ಲಿ ಗುರುತಿಸಿದ್ದು, ಇನ್ನುಳಿದ ಬಾರತೀಯ ನೋಬೆಲ್ ಪಡೆದ ಬಾರತೀಯ ಸುಬ್ರಮಣ್ಯನ್ ಚಂದ್ರಶೇಕರ್ ಅವರು ಲಾಹೋರ್‍ನಲ್ಲಿ (ಈಗಿನ ಪಾಕಿಸ್ತಾನದಲ್ಲಿದೆ) ಹುಟ್ಟಿದ್ದು, ಮತ್ತು ಇನ್ನೋರ್‍ವ ನೋಬೆಲ್ ವಿಜೇತೆ ಮದರ್ ತೆರೆಸಾ ಬಾರತೀಯ ಪೌರತ್ವ ಪಡೆದವರಾಗಿದ್ದಾರೆ.

(ಮಾಹಿತಿ ಮತ್ತು ಚಿತ್ರ ಸೆಲೆ: weforum.org, timesofisrael.com )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.