ಕುಳಿತಿರಲು ನಾನು ರಾದೆಯಂತೆ

– ಸುರಬಿ ಲತಾ.

loneliness2

 

ಕುಳಿತಿರಲು ನಾನು ರಾದೆಯಂತೆ
ಬರದೇ ಹೋದೆ ನೀನು ಕ್ರಿಶ್ಣನಂತೆ

ನಿನ್ನ ಕಾಣದೆ ನೊಂದು
ಬೇಯುವುದು ನನ್ನ ಮನಸು
ಅದನು ಅರಿತೂ ಕೂಡ ನೀನು
ಒಡೆಯುವುದೇಕೋ ಕನಸು

ಅಳಿಸುವುದರಲ್ಲಿ ನಿನಗೇನೋ
ಸಿಗುವುದು ಸಂತಸ
ಅದಕ್ಕಾಗೇ ನಾ ತೋರುವೆ
ನಿನ್ನಲ್ಲಿ ಮುನಿಸು

ಕಾಡಿಸಿ, ಸತಾಯಿಸಿ ಕೊಡುವೆ
ನೆಪವೊಂದು ಸಾವಿರ
ನೀ ಅರಿಯದೇ ಹೋಗುವೆ
ನನ್ನ ಮನದ ಬೇಸರ

ದೂರ ಹೋಗಲೂ ಆಗದೆ
ಬರುವೆ ನಿನ್ನೊಲವ ಕೋರಿ
ಲಾಲಿಸಿ, ಮುದ್ದಿಸಿ ಬಳಿ ನೀನು
ಸೇರುವೆ ಪ್ರೀತಿಯ ತೋರಿ

( ಚಿತ್ರ ಸೆಲೆ: huffingtonpost.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: