ಉತ್ತರ ಕೊರಿಯಾದಲ್ಲಿರುವ ವಿಚಿತ್ರ ಕಟ್ಟಲೆಗಳು

ವಿಜಯಮಹಾಂತೇಶ ಮುಜಗೊಂಡ.

ಕೆಲವು ನಾಡುಗಳಲ್ಲಿ ವಿಚಿತ್ರವಾದ ಕಟ್ಟಲೆಗಳಿರುತ್ತವೆ. ಗಲ್ಪ್ ನಾಡುಗಳಲ್ಲಿ ಬಿಕ್ಶೆ ಬೇಡುವುದು ಅಲ್ಲಿನ ಕಾನೂನಿಗೆ ವಿರುದ್ದವಾದುದು. ಬೂತಾನ್‍ನಲ್ಲಿ ಜಾರುಹಲಗೆಗಳ(skateboards) ಬಳಕೆಯ ಮೇಲೆ ತಡೆ ಇದೆ. ಯಾವಾಗಲೂ ಮುಕದ ಮೇಲೆ ನಗು ಹೊಂದಿರಬೇಕು ಎನ್ನುವ ಒಂದು ವಿಚಿತ್ರ ಕಾನೂನು ಇಟಲಿಯ ಮಿಲನ್ ನಗರದಲ್ಲಿ ಇದೆ. ಆದರೆ ಬಡಗು ಕೊರಿಯಾದಲ್ಲಿರುವ(North Korea) ವಿಚಿತ್ರವಾದ ಈ ಕೆಲ ಏರ‍್ಪಾಟುಗಳು ಮತ್ತು ಕಟ್ಟಲೆಗಳನ್ನು ನೀವು ನಂಬಲಿಕ್ಕಿಲ್ಲ!

ಬಡಗು ಕೊರಿಯಾದಲ್ಲಿರುವ ಟಿವಿ ಚಾನೆಲ್‍ಗಳ ಸಂಕ್ಯೆ ಬರೀ 3!

ನಮ್ಮಲ್ಲಿ ಕಮ್ಮಿಯೆಂದರೂ ನೂರಾರು ಟಿವಿ ಚಾನೆಲ್‍ಗಳಿವೆ. ಆದರೆ ಬಡಗು ಕೊರಿಯಾದಲ್ಲಿ ಇರುವ ಚಾನೆಲ್‍ಗಳ ಸಂಕ್ಯೆ ಬರೀ 3. ಈ ಮೂರು ಚಾನೆಲ್ ಬಿಟ್ಟರೆ ಅವರಿಗೆ ಬೇರೆ ಆಯ್ಕೆಯೇ ಇಲ್ಲ. ಅಲ್ಲದೇ ಮೂರೂ ಚಾನೆಲ್‍ಗಳಲ್ಲಿ ಯಾವ ಕಾರ‍್ಯಕ್ರಮಗಳು ಮೂಡಿಬರಬೇಕು ಎನ್ನುವುದೂ ಅಲ್ಲಿನ ಸರಕಾರದ ಹಿಡಿತದಲ್ಲಿದೆ.

ಮೂರು ತಲೆಮಾರುಗಳ ಶಿಕ್ಶೆಯ ಬಗ್ಗೆ ನೀವು ಈ ಹಿಂದೆ ಕೇಳಿರಲಿಕ್ಕಿಲ್ಲ!

ಬಡಗು ಕೊರಿಯಾದಲ್ಲಿ ತಪ್ಪು ಮಾಡಿದರೆ ಅವರ ಇಡೀ ಕುಟುಂಬಕ್ಕೆ ಶಿಕ್ಶೆ ತಪ್ಪಿದ್ದಲ್ಲ. ತಪ್ಪು ಮಾಡಿದವರಶ್ಟೇ ಅಲ್ಲದೇ ಇನ್ನೆರಡು ತಲೆಮಾರುಗಳು ಜೈಲಿನಲ್ಲಿ ಕೊಳೆಯಬೇಕು. ಜೈಲಿನಿಂದ ಯಾರೂ ತಪ್ಪಿಸಿಕೊಂಡು ಹೋಗದಿರಲಿ ಎನ್ನುವ ಉದ್ದೇಶದಿಂದ ಈ ಕಟ್ಟಲೆ ಇದೆ.

ಇಲ್ಲಿ ನಿಮ್ಮಿಶ್ಟದಂತೆ ತಲೆಕೂದಲನ್ನು ಕತ್ತರಿಸಿಕೊಳ್ಳುವ ಹಾಗಿಲ್ಲ!

ಹೌದು, ನಿಮಗೆ ಬೇಕೆನಿಸಿದ ಹಾಗೆ ಕೂದಲಂದ(hairstyle) ಮಾಡಿಕೊಳ್ಳುವುದಕ್ಕೆ ಬಡಗು ಕೊರಿಯಾದಲ್ಲಿ ತಡೆಯಿದೆ. ಸರಕಾರ ಒಪ್ಪಿಗೆ ನೀಡಿರುವ 28 ಬಗೆಗಳಲ್ಲಿ ಮಾತ್ರ ನಿಮ್ಮ ಕೂದಲನ್ನು ಕತ್ತರಿಸಿಕೊಳ್ಳಬೇಕು. ಇದು ಗಂಡಸರಿಗೆ ಅಶ್ಟೇ ಅಲ್ಲದೆ ಹೆಂಗಸರಿಗೂ ಅನ್ವಯಿಸುತ್ತದೆ! ಸ್ಪೈಕ್ ಶೈಲಿಗೆ ಅವಕಾಶವೇ ಇಲ್ಲ, ಅದು ಬಂಡಾಯಕೋರರಂತೆ ಕಾಣುತ್ತದೆ ಎನ್ನುವುದು ಅಲ್ಲಿನ ಸರಕಾರದ ಅನಿಸಿಕೆ. 2013ರಲ್ಲಿ ಈ ಕಟ್ಟಲೆಯನ್ನು ಜಾರಿಗೆ ತಂದದ್ದು ಅಲ್ಲಿನ ಮುಂದಾಳು ಕಿಮ್ ಜಾಂಗ್-ಉನ್. ಎಲ್ಲರಿಗಿಂತ ಬೇರೆಯಾಗಿರಬೇಕು ಎನ್ನುವ ಉದ್ದೇಶದಿಂದ ಕಿಮ್ ಅವರ ಕೂದಲಂದವನ್ನು ಸರಕಾರ ಒಪ್ಪಿಗೆ ನೀಡಿರುವ 28 ಶೈಲಿಗಳ ಪಟ್ಟಿಯಲ್ಲಿ ಸೇರಿಸಿಲ್ಲ.

ರಾಜದಾನಿಯಲ್ಲಿ ನೆಲೆಸಲು ಸರಕಾರದ ಅನುಮತಿ ಕಡ್ಡಾಯ

ಬಡಗು ಕೊರಿಯಾದ ರಾಜದಾನಿ ಪ್ಯೂಂಗಾಂಗ್‌ನಲ್ಲಿ ನೆಲೆಸಲು ಎಲ್ಲರಿಗೂ ಅವಕಾಶ ಇಲ್ಲ. ಅತ್ಯಂತ ಯಶಸ್ವಿ, ಸಿರಿವಂತ ಇಲ್ಲವೇ ಪ್ರಬಾವಶಾಲಿ ಮಂದಿ ಮಾತ್ರ ಪ್ಯೂಗಾಂಗ್‍ನಲ್ಲಿ ನೆಲೆಸಬಹುದು. ಸರಕಾರದ ಒಪ್ಪಿಗೆ ಇದ್ದರೆ ಮಾತ್ರ ಇಲ್ಲಿ ನೆಲೆಸಲು ಅವಕಾಶ. ಇಂತಹ ಕಟ್ಟಲೆ ತಂದಿರುವುದೂ ಕಿಮ್ ಜಾಂಗ್-ಉನ್ ಅವರೇ.

ಶಾಲೆಗಳಲ್ಲಿ ಕುರ‍್ಚಿ-ಬೆಂಚು, ಕಟ್ಟಡದ ಸಾಮಾನುಗಳಿಗೂ ದುಡ್ಡು ತೆರಬೇಕು

ಮಕ್ಕಳನ್ನು ಶಾಲೆಗೆ ಕಳಿಸುವ ತಂದೆತಾಯಿಗಳು ಶಾಲೆಯ ಕುರ‍್ಚಿ-ಬೆಂಚು, ಅಶ್ಟೇ ಏನು ಕಟ್ಟಡಗಳ ವೆಚ್ಚವನ್ನೂ ಬೇರೆಯಾಗಿ ತುಂಬಬೇಕು. ಹೀಗೊಂದು ವಿಚಿತ್ರವಾದ ಕಟ್ಟಳೆ ಬಡಗು ಕೊರಿಯಾದಲ್ಲಿದೆ. ಮಕ್ಕಳು ಬಳಸುವ ಕುರ‍್ಚಿ , ಬೆಂಚು, ಕಟ್ಟಡಗಳ ವೆಚ್ಚ ಕಲಿಕೆಮನೆಯ ಶುಲ್ಕದಲ್ಲಿ ಸೇರಿಲ್ಲವಾದ್ದರಿಂದ ಅವುಗಳನ್ನು ಪ್ರತ್ಯೇಕವಾಗಿ ನೀಡಬೇಕು ಎನ್ನುವುದು ಇದಕ್ಕೆ ಕಾರಣವಂತೆ!

ಬೈಬಲ್ ಇಟ್ಟುಕೊಳ್ಳುವುದು ಇಲ್ಲಿನ ಕಾನೂನಿಗೆ ವಿರುದ್ದವಾದುದು

ಬಡಗು ಕೊರಿಯಾದಲ್ಲಿ ಬೈಬಲ್ ಇಟ್ಟುಕೊಂಡರೆ ತೊಂದರೆ ತಪ್ಪಿದ್ದಲ್ಲ. ಬೈಬಲ್ ಪಾಶ್ಚಿಮಾತ್ಯ ಸಂಸ್ಕ್ರುತಿಯ ಗುರುತು, ಇದನ್ನು ಇಟ್ಟುಕೊಂಡರೆ ಮಂದಿಯ ಮನಸ್ಸಿನ ಮೇಲೆ ಪರಿಣಾಮ ಬೀರಿ ಮತಾಂತರಕ್ಕೆ ಅವಕಾಶ ಮಾಡಬಲ್ಲುದು ಎನ್ನುವ ಉದ್ದೇಶದಿಂದ ಬೈಬಲ್ ಬಳಕೆಗೆ ತಡೆ ಇದೆ. ಒಮ್ಮೆ ಕ್ರಿಶ್ಚಿಯನ್ ಹೆಂಗಸೊಬ್ಬಳು ಬೈಬಲ್‍ ಅನ್ನು ಹಂಚುತ್ತಿದ್ದಾಗ ಅವಳನ್ನು ಬಂದಿಸಿ, ಗಲ್ಲಿಗೇರಿಸಲಾಯಿತು.

ಆಪಲ್, ಸೋನಿ ಮತ್ತು ಮೈಕ್ರೊಸಾಪ್ಟ್ ಕಂಪನಿಗಳು ತಮ್ಮ ಮಾಡುಗೆಗಳನ್ನು ಇಲ್ಲಿ ಮಾರುವಂತಿಲ್ಲ

ಮಿನ್ಚಳಕದೆಣಿಗಳ(electronic goods) ದೊಡ್ಡ ಮಾಡುಗರಾದ ಆಪಲ್, ಸೋನಿ ಮತ್ತು ಮೈಕ್ರೊಸಾಪ್ಟ್ ಕಂಪನಿಯ ಅಲೆಯುಲಿ, ಟಿವಿ ಅತವಾ ಮಡಿಲೆಣ್ಣುಕಗಳು (laptop) ಬಡಗು ಕೊರಿಯಾದಲ್ಲಿ ಸಿಗುವುದಿಲ್ಲ

ಪಶ್ಚಿಮದೆಡೆಯ ಯಾವುದೇ ನಲ್ಬರಹ ಬಡಗು ಕೊರಿಯಾದ ಒಳಗೆ ನುಸುಳದು

ಬಡಗು ಕೊರಿಯಾಗೆ ಬರುವವರು ಅಮೆರಿಕದ ಕಡೆಗಿನ ಯಾವುದೇ ಹಾಡು, ಓಡುತಿಟ್ಟ(video) ಇಲ್ಲವೇ ಹೊತ್ತಗೆಗಳನ್ನು ಒಳಗೆ ತರುವಂತಿಲ್ಲ. ಸುತ್ತಾಟಕ್ಕೆಂದು ಬಂದಿದ್ದರೆ ಸುತ್ತಾಡುಗರ(tourists) ಬಳಿಯಿರುವ ಯಾವುದೇ ಬಗೆಯ ಪಾಶ್ಚಿಮಾತ್ಯ ನಲ್ಬರಹದ ಒಯ್ಯುಕಗಳನ್ನು(media) ವಶಕ್ಕೆ ತೆಗೆದುಕೊಂಡ ಬಳಿಕವೇ ನಾಡಿನ ಒಳಬರಲು ಅವಕಾಶ. ಸುತ್ತಾಡುಗರ ಕಯ್ಪಿಡಿ ಆದರೂ ಅಶ್ಟೇ, ಯಾವುದನ್ನೂ ಒಳತರಲು ಅವಕಾಶವಿಲ್ಲ.

(ಮಾಹಿತಿ ಮತ್ತು ಸೆಲೆ: indiatimes.comnews.com.au)Categories: ನಾಡು

ಟ್ಯಾಗ್ ಗಳು:, , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s