ಪ್ರೀತಿ ಮೂಡಿದೆ, ಹೊಸ ಶಂಕೆ ಕಾಡಿದೆ…

– ಸಿಂದು ಬಾರ‍್ಗವ್.

ಮನದಲಿ ಹೊಸ ಬಾವವು
ಮರೆಯದ ಹೊಸ ರಾಗವು
ನೀ ಬಂದು ಎದುರಾಗಲೂ
ಪ್ರೀತಿ ಮೂಡಿದೆ, ಹೊಸ ಶಂಕೆ ಕಾಡಿದೆ

ಜೀಕುವ ಜೋಕಾಲಿಯ
ಹಿಡಿಯಲಿ ಹೊಸ ಕನಸನು
ನಾ ಈಗ ಹೊಸೆದಿರಲೂ
ಪ್ರೀತಿ ಮೂಡಿದೆ ಹೊಸ ಶಂಕೆ ಕಾಡಿದೆ

ಹದಮಾಡಿದ ಹಸಿ ಮಣ್ಣಲಿ
ಅರಿಯದೇ ನಿನ್ನ ಬಿಂಬವ
ನಾನೀಗ ಕೊರೆದಿರಲು
ಪ್ರೀತಿ ಮೂಡಿದೆ ಹೊಸ ಶಂಕೆ ಕಾಡಿದೆ

ಮನಸಿನ ಮೂಲೆಯಲಿ
ಹೂವರಳಿ ನಿಂತಿರಲು
ಮೂಡಿದ ಚಿತ್ರದಲಿ ನಾನಿನ್ನ ನೋಡಿರಲು
ಪ್ರೀತಿ ಮೂಡಿದೆ ಹೊಸ ಶಂಕೆ ಕಾಡಿದೆ

(ಚಿತ್ರ ಸೆಲೆ: unsplash.com)

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: