ಇದು ನೀನಿಲ್ಲದ ಹೊತ್ತು..

ಸ್ವಪ್ನ.

ಬೆಂಬಿಡದೆ ಕಾಡುತಿದೆ ನಿನ್ನೀ ನೆನಪು
ಹಚ್ಚನೆಯ ಬೆಳಕಿನಾ ಮಂದಸ್ಮಿತವ ಹೊತ್ತು

ನೀನಿಲ್ಲದೆ ನಾನಿರುವೆನೋ ನಾನರಿಯೆ
ನಿನ್ನ ಸ್ಮರಿಸದೇ ನನ್ನ ಮನ ನಿರ‍್ಜೀವಿ

ತಿಳಿದಿಲ್ಲ ನನಗೆ ನೀ ಸರ‍್ವವ್ಯಾಪಿ
ಮನಸಿನಾ ಹಂಬಲದ ಹಪಾಹಪಿ

ಚಿಮ್ಮುವ ಆಶಾಕಾರಂಜಿಯ ಆಸೆಗಳು ನೀನೆ
ಸ್ವಪ್ನಗಳ ಹೆಮ್ಮರದ ಹೊಂಗನಸು ನೀನೆ

ಕನಸಿನಾ ಲೋಕದಲಿ ಕಾಣದೆ ಬಳಿಬಂದು
ಎಚ್ಚರಿಸು ನನ್ನನು ಪ್ರಗ್ನೆ ತಪ್ಪಿರುವೆ

( ಚಿತ್ರ ಸೆಲೆ: theguardian.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: