ಹಬ್ಬದಲ್ಲಿ ಮಾಡುವ ವಿಶೇಶ ಸಿಹಿತಿಂಡಿ ‘ಎರಿಯಪ್ಪಾ’

– ಕಲ್ಪನಾ ಹೆಗಡೆ.

ಬೇಕಾಗುವ ಸಾಮಗ್ರಿಗಳು:

2 ಪಾವು ಅಕ್ಕಿ
2 ಉಂಡೆ ಬೆಲ್ಲ
2 ಏಲಕ್ಕಿ
1 ಬಾಳೆಹಣ್ಣು

ಮಾಡುವ ಬಗೆ:

ಮೊದಲು ಅಕ್ಕಿಯನ್ನು ತೊಳೆದು ಹಿಂದಿನ ರಾತ್ರಿ ನೀರಿನಲ್ಲಿ ನೆನಸಿಕೊಳ್ಳಿ. ಬೆಳಗ್ಗೆ ಮಿಕ್ಸಿಗೆ ಹಾಕಿ ಗಟ್ಟಿಯಾಗಿ ರುಬ್ಬಿಕೊಳ್ಳಿ. ಬಳಿಕ ಬೆಲ್ಲ, ಏಲಕ್ಕಿ,  ಬಾಳೆಹಣ್ಣು, ಚಿಟಿಕೆ ಉಪ್ಪುಹಾಕಿ ಮಿಕ್ಸಿಯಲ್ಲಿ ರುಬ್ಬಿ ಒಂದು ಪಾತ್ರೆಯಲ್ಲಿ ಚೆನ್ನಾಗಿ ಕಲಸಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಚೆನ್ನಾಗಿ ಕಾದ ಬಳಿಕ ಕಲಸಿಟ್ಟ ಹಿಟ್ಟನ್ನು ಸಣ್ಣ ಸೌಟಿನಿಂದ (ಇಲ್ಲವೇ ದೊಡ್ಡ ಚಮಚ) ತೆಗೆದುಕೊಂಡು ಕಾದ ಎಣ್ಣೆಗೆ ಒಂದೊಂದೇ ಸೌಟು ಹಿಟ್ಟನ್ನು ಬಿಡಿ. ಇದನ್ನು ಸಣ್ಣ ಉರಿಯಲ್ಲಿ ಬೇಯಿಸಿಕೊಳ್ಳುವುದು ಒಳ್ಳೆಯದು. ಆನಂತರ ಜಾಲಿ ಸೌಟಿನಿಂದ ತಿರುಗು ಮುರುಗು ಮಾಡಿ ಬೇಯಿಸಿ. 1 ಜಾಲಿಸೌಟಿನಿಂದ ತೆಗೆದು ಇನ್ನೊಂದು ಜಾಲಿಸೌಟನ್ನು ಅದರ ಮೇಲಿಟ್ಟು ಎಣ್ಣೆಯನ್ನು ಹಿಂಡಿಕೊಳ್ಳಿ. ಆಮೇಲೆ ನೀವು ತಯಾರಿಸಿದ ಎರಿಯಪ್ಪಾವನ್ನು ತುಪ್ಪದೊಂದಿಗೆ ಅತವಾ ಹಾಗೆಯೇ ತಿನ್ನಲು ನೀಡಿ. ಎರಿಯಪ್ಪಾ ಸವಿಯಲು ತುಂಬಾ ಚೆನ್ನಾಗಿರತ್ತೆ.

(ಚಿತ್ರ ಸೆಲೆ: ಕಲ್ಪನಾ ಹೆಗಡೆ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: