ಟೇಬಲ್ ಟೆನ್ನಿಸ್ ಎಂಬ ಒಳಾಂಗಣ ಆಟ

 ಆಶಿತ್ ಶೆಟ್ಟಿ.

ಟೇಬಲ್ ಟೆನ್ನಿಸ್ ಆಟವನ್ನು ‘ಪಿಂಗ್ ಪಾಂಗ್’ ಎಂದು ಕೂಡ ಕರೆಯಲಾಗುತ್ತದೆ. ಈ ಆಟದಲ್ಲಿ 2 ಅತವಾ 4 ಆಟಗಾರರು ಹಗುರವಾದ ಚೆಂಡನ್ನು ಟೇಬಲ್ಲಿನ ಒಂದು ಕಡೆಯಿಂದ ಇನ್ನೊಂದು ಕಡೆಗೆ ಚಿಕ್ಕ ಬ್ಯಾಟಿನಿಂದ ಹೊಡೆದು ಕಳುಹಿಸಬೇಕು. ಆಟವನ್ನು ಗಟ್ಟಿಯಾದ ಟೇಬಲ್ ಮೇಲೆ ಆಡಲಾಗುತ್ತದೆ. ಟೇಬಲ್ಲಿನ ಮದ್ಯದಲ್ಲಿರುವ ಬಲೆಯಿಂದ ಟೇಬಲ್ಲನ್ನು ಎರಡು ಬಾಗಮಾಡಲಾಗುತ್ತದೆ.

ಮೊದಲ ಸರ‍್ವ್ ನಂತರ, ತಮ್ಮ ಕಡೆ ಬಂದ ಚೆಂಡನ್ನು ವಿರೋದಿ ಆಟಗಾರರ ಕಡೆ ಚೆಂಡು ಒಂದು ಬಾರಿ ಪುಟಿದೇಳುವಂತೆ ಹೊಡೆಯಬೇಕು. ಆಟಗಾರ, ನಿಯಮಗಳು ತಿಳಿಸುವಂತೆ ಚೆಂಡನ್ನು ಹಿಂತಿರುಗಿ ಕಳುಹಿಸಲು ವಿಪಲನಾದಲ್ಲಿ ವಿರೋದಿ ಆಟಗಾರನಿಗೆ ಒಂದು ಅಂಕ ದೊರೆಯುತ್ತದೆ.

ಟೇಬಲ್ ಟೆನ್ನಿಸ್ ಹಿನ್ನಡವಳಿ

ಟೇಬಲ್ ಟೆನ್ನಿಸ್ ಆಟ ಹುಟ್ಟಿದ್ದು ವಿಕ್ಟೋರಿಯನ್ ಇಂಗ್ಲೆಂಡಿನಲ್ಲಿ. ಇಲ್ಲಿ ಆಟವನ್ನು ಮೇಲು ವರ‍್ಗದ ಜನರು ಊಟದ ನಂತರ ಒಳಾಂಗಣದಲ್ಲಿ ಆಡುತ್ತಿದ್ದರು. ಆಗಿನ ಕಾಲದಲ್ಲಿ ಬಾರತದಲ್ಲಿನ ಬ್ರಿಟಿಶ್ ಮಿಲಿಟರಿ ಅದಿಕಾರಿಗಳು ಪುಸ್ತಕ ಮತ್ತು ಗಾಲ್ಪ್ ಬಾಲನ್ನು ಬಳಸಿ ಆಡುತ್ತಿದ್ದರು. 1901 ರಲ್ಲಿ ಅಮೇರಿಕಾ ಪ್ರವಾಸದ ವೇಳೆ ಜೇಮ್ಸ್. ಡಬ್ಲ್ಯು. ಗಿಬ್ಸ್ ಎಂಬ ಟೇಬಲ್ ಟೆನ್ನಿಸ್ ಉತ್ಸಾಹಿ, ಆಡಲು ಉತ್ತಮವಾಗಿರುವ ಸೆಲ್ಯುಲಾಯ್ಡ್ ಚೆಂಡುಗಳನ್ನು ಕಂಡುಹಿಡಿದ. ಇದಾದ ನಂತರ ಅದೆ ವರ‍್ಶದಲ್ಲಿ, ಇ.ಸಿ.ಗೂಡೆ ಎಂಬಾತ ಆದುನಿಕ ರೂಪದ ಟೇಬಲ್ ಟೆನ್ನಿಸ್ ಬ್ಯಾಟನ್ನು ಕಂಡುಹಿಡಿದ. ಈ ಬ್ಯಾಟಿನಲ್ಲಿ ರಬ್ಬರ್  ಅನ್ನು ಚೆಂಡನ್ನು ಹೊಡೆಯುವ ಜಾಗಕ್ಕೆ ಹೊಂದಿಸಲಾಯಿತು.

1901ರ ಹೊತ್ತಿಗೆ ಆಟ ಎಶ್ಟು ಜನಪ್ರಿಯವಾಯಿತೆಂದರೆ ಬೇರೆ ಬೇರೆ ಕಡೆ ಟೇಬಲ್ ಟೆನ್ನಿಸ್ ಪಂದ್ಯಾವಳಿಗಳು ಶುರುವಾದವು. ಈ ಆಟದ ಬಗ್ಗೆ ಪುಸ್ತಕಗಳನ್ನು ಬರೆಯಲಾಯಿತು ಮತ್ತು ಅನದಿಕ್ರುತ ವಿಶ್ವಕಪ್ ಪಂದ್ಯಾವಳಿಗಳನ್ನು 1902ರಲ್ಲಿ ಆಯೋಜಿಸಲಾಯಿತು. 1921 ಇಸವಿಯಲ್ಲಿ ಬ್ರಿಟನ್ ನಲ್ಲಿ ಟೇಬಲ್ ಟೆನ್ನಿಸ್ ಅಸೋಸಿಯೆಶನ್ ಮತ್ತು 1926 ರಲ್ಲಿ ಅಂತರರಾಶ್ಟ್ರೀಯ ಟೇಬಲ್ ಟೆನ್ನಿಸ್ ಒಕ್ಕೂಟವನ್ನು ಹುಟ್ಟುಹಾಕಲಾಯಿತು (ಈ ಒಕ್ಕೂಟದಲ್ಲಿ ಸದ್ಯ 226 ಸದಸ್ಯ ಅಸೋಸಿಯೇಶನ್ ಗಳಿವೆ). ಅದೇ ವರುಶ ಲಂಡನಿನಲ್ಲಿ ಅದಿಕ್ರುತ ವಿಶ್ವ ಚಾಂಪಿಯನ್ ಶಿಪ್ ಅನ್ನು ಆಯೋಜಿಸಲಾಯಿತು. 1933 ರಲ್ಲಿ ಯುಎಸ್ ಟೇಬಲ್ ಟೆನ್ನಿಸ್ ಅಸೋಸಿಯೆಶನ್ ರೂಪುಗೊಂಡಿತು. ಟೇಬಲ್ ಟೆನ್ನಿಸ್ ಆಟವು 1988 ರಲ್ಲಿ ಒಲಂಪಿಕ್ಸ್ ಗೆ ಸೇರ‍್ಪಡೆಯಾಯಿತು.

ನಿಯಮ ಬದಲಾವಣೆ

2000 ಇಸವಿಯ ಸಿಡ್ನಿ ಒಲಿಂಪಿಕ್ಸ್ ನಂತರ ಅಂತರರಾಶ್ಟ್ರೀಯ ಟೇಬಲ್ ಟೆನ್ನಿಸ್ ಒಕ್ಕೂಟ, ಆಟವನ್ನು ಟಿವಿಯಲ್ಲಿ ವೀಕ್ಶಿಸಲು ಅನುಕೂಲವಾಗಲೆಂದು ಹಲವು ನಿಯಮ ಬದಲಾವಣೆಗಳನ್ನು ಮಾಡಿತು. ಅಕ್ಟೋಬರ್ 2000ನೇ ಇಸವಿಯಲ್ಲಿ, ಹಳೆಯ 38 ಮಿಮಿ(1.5 ಇಂಚು) ಚೆಂಡುಗಳನ್ನು 40ಮಿಮಿ (1.57 ಇಂಚು) ಚೆಂಡುಗಳಿಂದ ಅದಿಕ್ರುತವಾಗಿ ಬದಲಿಸಲಾಯಿತು. ಕೆಲವು ತಿಂಗಳ ನಂತರ ಅಂತರರಾಶ್ಟ್ರೀಯ ಟೇಬಲ್ ಟೆನ್ನಿಸ್ ಒಕ್ಕೂಟ 21 ಪಾಯಿಂಟ್ ಸ್ಕೋರಿಂಗ್ ಸಿಸ್ಟಮ್ ನಿಂದ 11 ಪಾಯಿಂಟ್ ಸ್ಕೋರಿಂಗ್ ಸಿಸ್ಟಮ್ ಗೆ ಬದಲಾಯಿಸಿತು.

ಟೇಬಲ್ ಟೆನ್ನಿಸ್ ಆಟದಲ್ಲಿ ಚೀನಿಯರದ್ದೇ ಮೇಲುಗೈ

ಟೇಬಲ್ ಟೆನ್ನಿಸ್ ಚೀನಾದ ರಾಶ್ಟ್ರೀಯ ಆಟ. ವಿಶ್ವ ಶ್ರೇಯಾಂಕದಲ್ಲಿ ಮತ್ತು ವಿಜೇತರಲ್ಲಿ ಚೀನೀ ಆಟಗಾರರದ್ದೇ ಮೇಲುಗೈ. 1981 ರಿಂದ ಇಲ್ಲಿಯವರೆಗೂ ಒಟ್ಟು 131 ವಿಶ್ವಕಪ್ ಪಂದ್ಯಾವಳಿಗಳಲ್ಲಿ 109 ಪಂದ್ಯಾವಳಿಗಳನ್ನು ಚೀನಾದವರು ಗೆದ್ದಿದಾರೆ.

ಮೆನ್ಸ್ ಸಿಂಗಲ್ಸ್ – 19ರಲ್ಲಿ 14
ವುಮೆನ್ಸ್ ಸಿಂಗಲ್ಸ್ – 19ರಲ್ಲಿ 17
ಮೆನ್ಸ್ ಡಬಲ್ಸ್ – 19ರಲ್ಲಿ 14
ವುಮೆನ್ಸ್ ಡಬಲ್ಸ್ – 19ರಲ್ಲಿ 18
ಮಿ‍ಕ್ಸೆಡ್ ಡಬಲ್ಸ್ – 19ರಲ್ಲಿ 16
ಮೆನ್ಸ್ ತಂಡ – 18ರಲ್ಲಿ 14
ವುಮೆನ್ಸ್ ತಂಡ – 18ರಲ್ಲಿ 16

1500 ಕ್ಕಿಂತ ಹೆಚ್ಚು ಬಗೆಯ ರಬ್ಬರ್

ಟೇಬಲ್ ಟೆನ್ನಿಸ್ ಬ್ಯಾಟಿನ ಮೇಲೆ ರಬ್ಬರ್ ಅನ್ನು ಹೊಂದಿಸಲಾಗಿರುತ್ತದೆ. ಬ್ಯಾಟಿಗೆ ಯಾವ ಬಗೆಯ ರಬ್ಬರ್ ಅನ್ನು ಬಳಸಬೇಕೆಂಬುದಕ್ಕೆ ಅದಿಕ್ರುತ ಪಟ್ಟಿಯೊಂದಿದ್ದು ಆ ಪಟ್ಟಿಯಲ್ಲಿ 1500ಕ್ಕಿಂತ ಹೆಚ್ಚು ಬಗೆಯ ರಬ್ಬರ್ ಬಗೆಗಳನ್ನು ಪಟ್ಟಿ ಮಾಡಲಾಗಿದೆ. ಆಟಗಾರರು ಟೇಬಲ್ ಟೆನ್ನಿಸ್ ಬ್ಯಾಟಿನ ಮೇಲೆ ಅದಿಕ್ರುತ ಪಟ್ಟಿಯಲ್ಲಿರುವ ರಬ್ಬರ್ ಗಳನ್ನು ಮಾತ್ರ ಅಂಟಿಸಬೇಕು. ಒಂದು ಕಡೆ ಕಪ್ಪು ಬಣ್ಣದ ರಬ್ಬರ್, ಮತ್ತೊಂದು ಕಡೆ ಕೆಂಪು ಬಣ್ಣದ ರಬ್ಬರ್ ಇರಬೇಕು. ಬಾಲನ್ನು ಸ್ಪಿನ್ ಮಾಡಲು ಈ ರಬ್ಬರ್ ಅನುಕೂಲ.

ಟೇಬಲ್ ಟೆನ್ನಿಸ್ ಚೆಂಡುಗಳು ಸೆಲ್ಯುಲಾಯ್ಡ್ ಪ್ಲಾಸ್ಟಿಕ್ ನವು

1901 ರಿಂದ ಟೇಬಲ್ ಟೆನ್ನಿಸ್ ಚೆಂಡುಗಳನ್ನು ಸೆಲ್ಯುಲಾಯ್ಡಿನಿಂದ ಮಾಡಲಾಗುತಿತ್ತು, ಇದನ್ನು ಹಂತಹಂತವಾಗಿ ಬದಲಾಯಿಸಲಾಯಿತು. ಜುಲೈ 1, 2014 ರಿಂದ ಅಂತರರಾಶ್ಟ್ರೀಯ ಮಟ್ಟದಲ್ಲಿ ಸೆಲ್ಯುಲಾಯ್ಡ್ ಪ್ಲಾಸ್ಟಿಕ್ ಚೆಂಡುಗಳನ್ನು ಬಳಕೆ ಮಾಡಲಾಗುತ್ತಿದೆ.

( ಮಾಹಿತಿ ಸೆಲೆ:  wikipedia )
( ಚಿತ್ರ ಸೆಲೆ: zimbio.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: