ಇರಲಿ ಒಂದು ಗೆಳೆತನ

– ಸುಹಾಸ್ ಮೌದ್ಗಲ್ಯ.

ಏಳುಬೀಳಿನ ಜೀವನ
ಮತ್ತೆ ಬಾರದು ಯೌವನ
ಮುಗಿವ ಮುನ್ನ ಈ ದಿನ
ಇರಲಿ ಒಂದು ಗೆಳೆತನ ಸ್ವಾರ‍್ತವಿಲ್ಲದ ಸಿರಿತನ

ಅಳುವ ಅಳಿಸುವ ಸಾದನ
ನಗುವ ಕಲಿಸುವ ಚೇತನ
ಕೆಡುಕ ಬಯಸದ ಹಿರಿತನ
ಇರಲಿ ಒಂದು ಗೆಳೆತನ ಸ್ವಾರ‍್ತವಿಲ್ಲದ ಸಿರಿತನ

ವಿಶ್ವಾಸವೇ ಇದರ ಆನನ
ಪ್ರೀತಿಯೇ ಇದರ ನಯನ
ಕುಶಿಯೇ ಇದರ ಚಲನವಲನ
ಇರಲಿ ಒಂದು ಗೆಳೆತನ ಸ್ವಾರ‍್ತವಿಲ್ಲದ ಸಿರಿತನ

ಹೊಸ ಹುರುಪಿನ ಜನನ
ಸವಿ ನೆನಪುಗಳ ನರ‍್ತನ
ಬದುಕು ನಿತ್ಯ ನೂತನ
ಇರಲಿ ಒಂದು ಗೆಳೆತನ ಸ್ವಾರ‍್ತವಿಲ್ಲದ ಸಿರಿತನ

(ಚಿತ್ರ ಸೆಲೆ: pexels.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: