ಇನಿದು ಕನ್ನಡ ನುಡಿ

– ಚಂದ್ರಗೌಡ ಕುಲಕರ‍್ಣಿ.

ಇನಿದು ಕನ್ನಡ ನುಡಿಯ ಹಾಲಿಗೆ
ಮದುರ ಜೇನದು ಬೆರೆತಿದೆ
ಶಬ್ದ ಅರ‍್ತದ ಆಚೆ ಆಚೆಗೆ
ಬಾವ ಕುಡಿಯನು ಚಾಚಿದೆ!

ಅಕ್ಕರಕ್ಕರ ಒಡಲ ಒಳಗಡೆ
ಹೂವು ಪರಿಮಳ ಹಾಸಿದೆ
ಸರಣಿ ಸಾಲಿನ ಪದಗಳೊಡಲಲಿ
ಗಂದ ಚಂದನ ಸೂಸಿದೆ!

ಹಾಡು ಪಲ್ಲವಿ ಚರಣ ಲಯದಲಿ
ಹಸಿರು ಚೇತನದುಸಿರಿದೆ
ನಾದ ಲಹರಿಯ ಗಾನ ಸುದೆಯಲಿ
ಪ್ರೀತಿ ಪ್ರೇಮದ ಹೆಸರಿದೆ!

ಒಲಿದು ನಸಲಗೆ ನುಡಿವ ತೇಜದಿ
ರವಿಯ ಕಿರಣವು ಬೆರೆತಿದೆ
ತಣಿದು ಸವಿಯುವ ತ್ರುಪ್ತ ಹ್ರುದಯಕೆ
ಹುಣ್ವಿ ಚಂದ್ರನ ಸೊಗಸಿದೆ!

(ಚಿತ್ರ ಸೆಲೆ: ytimg.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *