ಅಮ್ಮ ಎಂಬ ಅದ್ಬುತ
ಬರೆಯುತಿರುವೆ ನಾನು ಪದಗಳಲ್ಲಿ
ಅಮ್ಮ ಎಂಬ ಅದ್ಬುತವ ಕುರಿತು
ನಾ ಗರ್ಬದಲ್ಲಿ ಕುಣಿಯುತಿರಲು
ಅವಳು ನನ್ನ ಹೊತ್ತು ನಲಿಯುತ್ತಿದ್ದಳು
ನನ್ನ ಆಗಮನ ಕಾಯುತ್ತಲೇ
ನೋವನ್ನು ಸಹಿಸಿಕೊಳ್ಳುತ್ತಿದ್ದಳು
ನಾ ಬರುವ ಸಮಯ
ನನ್ನಮ್ಮನಿಗದು ಪುನರ್ ಜನ್ಮ
ಅದೆಶ್ಟೋ ನೋವ ಸಹಿಸಿಕೊಂಡು
ನನ್ನ ಈ ಲೋಕಕ್ಕೆ ಆಹ್ವಾನಿಸಿದಳು
ನಾ ಅಳುತಿರಲು ಎತ್ತಿ ಮುದ್ದಾಡಿದಳು
ಹಾಲುಣಿಸಿ ನನ್ನ ಹಸಿವ ತಣಿಸಿದಳು
ಅದೆಶ್ಟೋ ಮಾಸದ ನಿದ್ರೆಗಳ
ನನ್ನಮ್ಮ ನನಗಾಗಿ ತೊರೆದಳು
ಗುಮ್ಮ ಬಂತೆಂದು ಬೆದರಿಸಿ
ನನಗುಣಿಸುವುದೆ ಅವಳಿಗೆ ಕಶ್ಟದ ಹೊತ್ತು
ಅವಳಿಂದ ಕೈ ತುತ್ತು,ಸಿಹಿ ಮುತ್ತು
ಪಡೆಯುವುದೇ ಒಂದು ಗಮ್ಮತ್ತು
ಜೀವನ ಸಾಗಿಸುವ ದಾರಿ ತೋರಿಸಿ
ನಯ-ವಿನಯವ ತಿಳಿಪಡಿಸಿ
ಕಶ್ಟಗಳನ್ನೆಲ್ಲಾ ದೂರ ಸರಿಸಿ
ಕಾಪಾಡುವವಳು ನನ್ನ ತಾಯಿ
ನನ್ನ ನೋವಿಗವಳು ಕಣ್ಣೀರು ಸುರಿಸುವಳು
ನಾ ನಗುತಿರಲು ಮನದಲ್ಲೇ ಕುಣಿವಳು
ದೇವರು ನನಗೆ ಕೊಟ್ಟ ಅದ್ಬುತವೇ
ನನ್ನವ್ವ, ಹಡೆದವ್ವ
ತೀರಿಸಲಾಗದು ಈ ಜನ್ಮದಲ್ಲಿ ಅವಳ ರುಣ
ಕಾಯುವೇ ನಾನು ಅವಳನ್ನು ಪ್ರತಿಕ್ಶಣ
(ಚಿತ್ರ ಸೆಲೆ: pexels.com)


ಇತ್ತೀಚಿನ ಅನಿಸಿಕೆಗಳು