ರುಚಿಯಾದ ಸಿಹಿ ತಿನಿಸು – ಗುಳ್ಪಟ್

– ಕಲ್ಪನಾ ಹೆಗಡೆ.

ಗುಳ್ಪಟ್

ಗುಳ್ಪಟ್, ಇದು ರವೆಉಂಡೆ ಹಾಗೆ ಕಾಣುವ ಒಂದು ರುಚಿಯಾದ ಸಿಹಿತಿನಿಸು. ಉಂಡೆಬೆಲ್ಲವನ್ನು ಹಾಕಿ ಈ ತಿನಿಸನ್ನು ಮಾಡುವುದರಿಂದ ಇದರ ರುಚಿ ತುಂಬಾ ಬೇರೆಯಾಗಿರುತ್ತದೆ. ಹೆಚ್ಚಾಗಿ ಮಹಾಶಿವರಾತ್ರಿ ಹಬ್ಬಕ್ಕೆ ಗುಳ್ಪಟ್ ಸಿಹಿಯನ್ನು ಮಾಡುತ್ತಾರೆ. ಹಬ್ಬಗಳಲ್ಲಿ ಗೊಜ್ಜವಲಕ್ಕಿ, ಸಜ್ಜಿಗೆ, ಉಪ್ಪಿಟ್ಟಿನ ಜೊತೆಗೆ ಗುಳ್ಪಟ್ ಅನ್ನು ಮಾಡಿ ಹಬ್ಬದ ವಿಶೇಶ ತಿಂಡಿಯಾಗಿ ಸವಿಯುತ್ತಾರೆ. ಬನ್ನಿ, ಈ ಇದನ್ನು ಮಾಡುವುದು ಹೇಗೆ ಎಂದು ನೋಡೋಣ.

ಬೇಕಾಗುವ ಸಾಮಗ್ರಿಗಳು

1/4 ಕೆ.ಜಿ ಚಿರೋಟಿ ರವೆ
1 ಉಂಡೆಬೆಲ್ಲ
5 ಚಮಚ ತುಪ್ಪ
ಏಲಕ್ಕಿ
ಅರ‍್ದ ಹೋಳು ತೆಂಗಿನಕಾಯಿತುರಿ

ಮಾಡುವ ಬಗೆ

ಮೊದಲು ರವೆಯನ್ನು ತುಪ್ಪದೊಂದಿಗೆ ಚೆನ್ನಾಗಿ ಹುರಿದುಕೊಳ್ಳಿ. 2 ಲೋಟ ನೀರಿಗೆ ಉಂಡೆಬೆಲ್ಲ ಹಾಗೂ ಏಲಕ್ಕಿ ಪುಡಿಯನ್ನು ಹಾಕಿ ಕುದಿಸಿ ಸೋಸಿಕೊಳ್ಳಿ.
ಇನ್ನೊಂದು ಪಾತ್ರೆಯಲ್ಲಿ ಕಾಯಿತುರಿಗೆ ಸ್ವಲ್ಪ ನೀರು ಹಾಕಿ ಅದನ್ನು ಕುದಿಸಿ. ಕುದಿಯುತ್ತಿರುವ ಕಾಯಿತುರಿಗೆ ಈ ಮೊದಲೇ ಕುದಿಸಿ ಸೋಸಿಟ್ಟುಕೊಂಡ ಬೆಲ್ಲದ ನೀರನ್ನು ಹಾಕಿ. ಆಮೇಲೆ ಹುರಿದಿಟ್ಟ ರವೆಯನ್ನು ಹಾಕಿ ಬೇಯಿಸಿ. ರವೆ ಬೆಂದಮೇಲೆ 4 ಚಮಚ ತುಪ್ಪವನ್ನು ಹಾಕಿ ಚೆನ್ನಾಗಿ ಕಲಸಿ. ಸ್ವಲ್ಪ ಆರಿದ ನಂತರ ಉಂಡೆಗಳನ್ನಾಗಿ ಮಾಡಿದರೆ ಗುಳ್ಪಟ್ ಸಿದ್ದ.

(ಚಿತ್ರ ಸೆಲೆ:  ಕಲ್ಪನಾ ಹೆಗಡೆ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: