ತುಂಬಿದ ಮನೆಯಲಿ ತಂಗಿಯ ನೆನಪು

– ಶಾಂತ್ ಸಂಪಿಗೆ.

marriage, bride, home, brother, sister, ಅಣ್ಣ, ತಂಗಿ, ಮದುವೆ, ತವರುಮನೆ, ತವರು

ತುಂಬಿದ ಮನೆಯಲಿ ತಂಗಿಯ ಜೊತೆಗೆ
ಕಳೆದ ಸಾವಿರ ನೆನಪಿತ್ತು
ತವರಿನ ತೋಟದಿ ಅರಳಿದ ಹೂವಿಗೆ
ಮದುವೆ ವಯಸ್ಸು ಬಂದಿತ್ತು

ಹೂವಿನ ಮೊಗದಿ ಮದುವೆ ಸಂಬ್ರಮ
ಸಡಗರದ ನಗುವು ತುಂಬಿತ್ತು
ಮದುವೆಯ ದಿಬ್ಬಣ ಮನೆಯಲಿ ಉತ್ಸವ
ಆದರೂ ಮನದಲಿ ಕೊರಗಿತ್ತು

ತವರನು ತೊರೆವ ಸಮಯವು ಬಂದಿತು
ಸಹಿಸದ ದುಕ್ಕವು ತುಂಬಿತ್ತು
ಅಣ್ಣ ತಮ್ಮಂದಿರ ಮುದ್ದಲಿ ಬೆಳೆದ
ತವರಿನ ಸಿರಿಯು ನಡೆದಿತ್ತು

ದೂರ ಹೋಗದೆ ಜೊತೆಯಲೆ ಇರುವೆಯ
ಎಂದು ಬೇಡುವ ಮನಸಿತ್ತು
ಅಕ್ಕಿಯ ಎರಚಿ ತವರನು ಹರಸಿ
ನಿನ್ನ ನಡಿಗೆಯು ಸಾಗಿತ್ತು

ದುಕ್ಕವ ಮರೆವೆವು ಹರಸಿ ನಿನ್ನನು
ನೆರೆಮನೆ ಬೆಳಕನು ಕಾದಿತ್ತು
ತಪ್ಪದೆ ಬರುವೆಯ ಹಬ್ಬಕೆ ನೀನು
ಮನೆಯು ನಿನ್ನನೆ ಕೇಳಿತ್ತು

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: