ಬರೆದೆ ನೂರು ಕವಿತೆ ನಾನು…

– ಸುರಬಿ ಲತಾ.

ಬರೆದೆ ನೂರು ಕವಿತೆ ನಾನು
ಕಲ್ಪನೆಯ ಕನವರಿಕೆಯಲಿ
ನೂರು ಬಾವ ಅದರಲಿತ್ತು
ಸವಿಯ ಜೇನು ಅದರಲಿ

ಒಂದೊಂದು ಮನದ ನೋವು
ಹಲವು ಮನಕೆ ತಂಪು ತರಲು
ನನ್ನ ಮನದ ಆಸೆಯು
ನಗುವ ತರಲು ಸಣ್ಣ ಒಲವು

ಬಾಳಿನಲ್ಲಿ ಯಾರಿಗಿಲ್ಲ ಬವಣೆಯು
ಮರೆತು ಸಾಗಬೇಕು ಅದುವೆ ಜಯವು
ನಿಮಗೆ ನಾನು, ನನಗೆ ನೀವು
ಮರೆವ ಎಲ್ಲಾ ಕಹಿ ಗಳಿಗೆಯೂ

ಒಂದು ಹಾಡು, ಒಂದು ಬರಹ
ನೀಗಲಿ ನೋವು-ದಾಹವು
ಮೆಟ್ಟಿ ನಿಲ್ಲುವ ನಾವು
ಪ್ರೀತಿಯ ಹೂ ನಗು ಸೂಸುತಲಿ

(ಚಿತ್ರ ಸೆಲೆ: pixabay.com)

2 ಅನಿಸಿಕೆಗಳು

  1. ಎರು ಪೇರಿನ ಗತಿಯಲ್ಲಿ ಜೀವನ. ನಗು ನಗುತಾ ನಲಿ,ನಲಿ ಎನೇ ಆದರೂ….

ಅನಿಸಿಕೆ ಬರೆಯಿರಿ:

This site uses Akismet to reduce spam. Learn how your comment data is processed.

%d bloggers like this: