ಇನಿಯನ ಸನಿಹ

– ಸಂದೀಪ ಔದಿ.

ಒಲವು, ಪ್ರೀತಿ, Love

ಸಂಜೆಯ ವೇಳೆ ಕಡಲ ತೀರದಿ
ಹೆಜ್ಜೆ ಗುರುತು ಮೂಡಿಸುತ
ಹ್ರುದಯ ಹಂಬಲಿಸಿದೆ ನಿನ್ನ ಸನಿಹ
ಕನವರಿಸುತ ಕಾದಿದೆ ಓ ಇನಿಯ

ಬಂದು ಕುಳಿತುಕೋ ಪಕ್ಕದಲಿ
ಏನೋ ಹೇಳುವುದಿದೆ ಪಿಸುದನಿಯಲಿ
ತುಸು ಚೆಲ್ಲುವಂತೆ ಬೆಳದಿಂಗಳ ನಗೆ
ತಿಳಿಯಲಿ ಅಮಾವಾಸ್ಯೆಗೂ ಹುಣ್ಣಿಮೆ ಬಗೆ

ಇದೋ ನೋಡು ಹೆಚ್ಚಾಗುತಿದೆ ಅಲೆಗಳ ತುಂಟಾಟ
ಅಂಗಾಲಿಗೆ ಕಚಗುಳಿ ಇಡುತಿವೆ ತೀರಕೆ ಬರುವ ನೆಪದಲಿ
ನಿನ್ನ ಹೆಸರ  ಅಳಿಸಿಹಾಕುತಿವೆ ಗೀಚಲು ನಾ ಮರಳಲಿ
ಆಹ್ವಾನವಿಲ್ಲದೆ ಅಣಿಯಾಗುತಿವೆ ಸಾಂತ್ವನ ಸಾಂಗತ್ಯದ ನೆಪದಲಿ

ಕಡಲಿಗೂ ಇನಿಯನಿಗೂ ತುಂಬಾ ಸಾಮ್ಯತೆ
ಇಬ್ಬರಲೂ ನಂಗಾಗಿ ವಿಶೇಶ ಬಾವುಕತೆ
ಆದರೂ ಎದೆಯಲ್ಲೆಲ್ಲೋ ನಿನ್ನ ವಿರಹದ ಕುರುಹು
ಹಂಬಲಿಸಿದೆ ನಿನ್ನ ಸನಿಹ, ಕನಸು ಮನಸು ಕನವರಿಸುತ ಇನಿಯ

( ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: