ಹೇಳೆಲೆ ಮದುವಂತಿ

– ಪದ್ಮನಾಬ.

ಹೇಳೆಲೆ ಮದುವಂತಿ
ನೀನಿದಕೇನಂತಿ
ಮುಟ್ಟದೆ ಮೀಟಿರುವೆ
ನನ್ನೆದೆಯ ಸ್ವರತಂತಿ

ಸುಂದರ ಸ್ವಪ್ನಗಳೇ
ಬಾಳಿನ ಬೆಳಕಂತಿ
ನನಸಾಗೊ ಹಾದಿಯಲಿ
ಜೊತೆಗಾತಿ ನೀನಂತಿ

ನಲುಮೆಯ ಮಾತುಗಳೇ
ಮನಸಿಗೆ ಜೇನಂತಿ
ಒಲವಿನ ಸವಿನೆನಪೇ
ಹ್ರುದಯಕೆ ಹಾಲಂತಿ

ಬರವಸೆಯಾ ಬೆಳಕು
ನಿನ್ನಯ ನುಡಿಯಲ್ಲೇ
ಎಡವಿದರೂ ನಾನು
ನಿನ್ನಯ ಮಡಿಲಲ್ಲೇ

(ಚಿತ್ರ ಸೆಲೆ: pixnio.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. bkrs setty says:

    ಸುಂದರ

ಅನಿಸಿಕೆ ಬರೆಯಿರಿ:

Enable Notifications