ಈ ಬದುಕೇ ನಿನಗಲ್ಲವೇ?

– ವೆಂಕಟೇಶ ಚಾಗಿ.

ಮೊದಲ ಹೆಜ್ಜೆ ಈ ಪ್ರೀತಿಗೆ
ಆಸೆಗಳ ಸೆಲೆ ಮೊಳಕೆ ಈ ಮನಸಲೇ
ನಿನ್ನದೇ ಕನವರಿಕೆ ಈ ಹ್ರುದಯಕೆ
ಕಾಣದಾದೆ ಕಾರಣ, ಕನಸುಗಳದೇ ಹೂರಣ
ಒಪ್ಪಿಕೋ ಈ ಪ್ರೀತಿಯ ನಿನ್ನದೇ ಈ ಮನ
ಈ ಬದುಕೇ ನಿನಗಲ್ಲವೇ?

ಆ ದಿನ ಆ ಸಮಯದಲಿ ಆ ನಿನ್ನ ಕಣ್ಣೋಟ
ಮರೆಯಲಾರೆ ನಾನೆಂದು, ಆ ನೆನಪೇ ಅನುಪಮ
ನನ್ನ ಅಂತರಂಗದ ಚಾಯೆಯಲಿ
ನಿನ್ನದೇ ಗುಂಗು, ಪ್ರತಿದಿನ ಅನುಕ್ಶಣ
ನೀನೊಲಿವೆಯಾ ನನಗೆ
ಈ ಬೇಡಿಕೆಯು ಅನುದಿನ
ಈ ಕ್ಶಣ ಈ ಮನ ಈ ದಿನಾಂತ ನಿನ್ನದೆ
ಈ ಬದುಕೇ ನಿನಗಲ್ಲವೇ

ಸಾಗರದ ಅಲೆಗಳಿಂದು ಏನನ್ನೋ ಹೇಳುತಿವೆ
ಕೇಳುವ ಬಾ ನೀ ಸನಿಹಕೆ ನಮ್ಮದೇ ಸಂದೇಶ
ಆ ಬಾನಿಗೂ ಅವಸರವೆ, ಈ ಇಳೆಗೂ ಆತುರವೆ
ನಮ್ಮ ಪ್ರೀತಿಯ ಅಂಕುರಕೆ
ಉತ್ತರಿಸು ನೀ ಈಗಲೇ ನನ್ನ ಮನದ ಪ್ರಶ್ನೆಗೆ
ಈ ಕ್ಶಣ ಈ ಮನ ಈ ಜೀವನ ನಿನ್ನದೇ
ಈ ಬದುಕೇ ನಿನಗಲ್ಲವೇ

(ಚಿತ್ರಸೆಲೆ: pexels.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: