ಎಳ್ಳಿನ ಹೋಳಿಗೆ
– ಸವಿತಾ.
ಬೇಕಾಗುವ ಸಾಮಾನುಗಳು
- ಎಳ್ಳು – 1 ಬಟ್ಟಲು
- ಒಣ ಕೊಬ್ಬರಿ ತುರಿ – 1/2 ಬಟ್ಟಲು
- ಬೆಲ್ಲದ ಪುಡಿ – 1 ಬಟ್ಟಲು
- ಏಲಕ್ಕಿ – 4
- ಗಸಗಸೆ – 1 ಚಮಚ
- ಚಿರೋಟಿ ರವೆ – 1/2 ಬಟ್ಟಲು
- ಗೋದಿ ಹಿಟ್ಟು – 1 ಬಟ್ಟಲು
- ಮೈದಾ ಹಿಟ್ಟು – 1/4 ಬಟ್ಟಲು
- ಎಣ್ಣೆ -2 ಚಮಚ
ಮಾಡುವ ಬಗೆ
ಗೋದಿ ಹಿಟ್ಟು, ಮೈದಾ ಹಿಟ್ಟು, ಚಿರೋಟಿ ರವೆಗೆ ಕಾದ ಎಣ್ಣೆ, ಸ್ವಲ್ಪ ನೀರು, ಉಪ್ಪು ಸೇರಿಸಿ ಹಿಟ್ಟು ನಾದಿ ಒಂದು ಗಂಟೆ ಕಾಲ ನೆನೆಯಲು ಬಿಡಿ.
ಎಳ್ಳು, ಕೊಬ್ಬರಿ ತುರಿ ಮತ್ತು ಗಸಗಸೆಯನ್ನು ಬೇರೆ ಬೇರೆಯಾಗಿ ಹುರಿದಿಟ್ಟುಕೊಳ್ಳಿ. ಬೆಲ್ಲವನ್ನು ನುಣ್ಣಗೆ ಪುಡಿ ಮಾಡಿ, ಬಿಸಿ ಮಾಡಿ ಕರಗಿಸಿ. ಹುರಿದಿಟ್ಟುಕೊಂಡ ಎಳ್ಳು, ಕೊಬ್ಬರಿ ತುರಿ ಮತ್ತು ಗಸಗಸೆಯನ್ನು ಕರಗಿದ ಬೆಲ್ಲಕ್ಕೆ ಸೇರಿಸಿ. ಪುಡಿ ಮಾಡಿದ ಏಲಕ್ಕಿ ಹಾಕಿ ಕಲಸಿ. ಹೋಳಿಗೆಗೆ ಬೇಕಾದ ಎಳ್ಳಿನ ಹೂರಣ ತಯಾರು.
ನಾದಿ ಇಟ್ಟ ಹಿಟ್ಟನ್ನು ಸ್ವಲ್ಪ ಸ್ವಲ್ಪ ಹಿಡಿದು ಅದರಲ್ಲಿ ಹೂರಣದ ಮಿಶ್ರಣವನ್ನು ತುಂಬಿ, ಎರಡೂ ಬದಿಗೆ ಕೊಂಚ ಒಣ ಮೈದಾ ಹಿಟ್ಟು ಹಚ್ಚಿ ಹೋಳಿಗೆ ಲಟ್ಟಿಸಿ . ತುಪ್ಪ ಅತವಾ ಎಣ್ಣೆ ಹಚ್ಚಿ, ಕಾದ ತವೆಯ ಮೇಲೆ ಎರಡೂ ಬದಿ ಬೇಯಿಸಿ ತೆಗೆಯಿರಿ.
ಈಗ ಬಿಸಿಯಾದ ಎಳ್ಳು ಹೋಳಿಗೆ ತುಪ್ಪ ಸವಿಯಲು ಸಿದ್ದ.
(ಚಿತ್ರ ಸೆಲೆ: ಬರಹಗಾರರ ಆಯ್ಕೆ)
ಇತ್ತೀಚಿನ ಅನಿಸಿಕೆಗಳು