ಕವಿತೆ: ನನ್ನೊಲವೆ

– .

ಒಲವು, Love

ನಿನ್ನ ಕಾಲ್ಬೆರಳಿಗೆ
ಕಾಲುಂಗುರ ತೊಡಿಸಿ
ನಿನ್ನ ಕಾಲ್ಗೆಜ್ಜೆಗಳ
ನಾದಕ್ಕೆ ತಲೆದೂಗುವೆ

ನಿನ್ನ ಬರಸೆಳೆದು
ಅರೆಗಳಿಗೆ ಬಿಡದೆ
ನನ್ನ ತೋಳುಗಳಲ್ಲಿ
ಬಿಗಿದಪ್ಪಿ ಮುದ್ದಾಡುವೆ

ನಿನ್ನ ಕಂಗಳೊಳಗೆ
ಕಾಣುವ ಬಿಂಬ ನಾನಾಗಿ
ನಿನ್ನ ಸ್ಮ್ರುತಿ ಪಟಲದಲಿ
ಚಿರಸ್ತಾಯಿಯಾಗುವೆ

ನಿನ್ನ ಮಡಿಲೊಳಗೆ
ಮಗುವಾಗಿ ಮಲಗಿ
ನಿನ್ನೊಲವ ಮಾತಿನ
ಜೋಗುಳವ ಕೇಳುವೆ

ನಿನ್ನ ಕಿರು ಬೆರಳನು
ಹಿಡಿದು ಏಳುಬೀಳಿನ
ಹಾದಿಯಲಿ ಜೊತೆಗೆ
ನಗಿಸುತ ನಡೆಯುವೆ

ನನ್ನ ಹ್ರುದಯದ
ಮಂದಿರದೊಳಗೆ
ನಿನ್ನಿಟ್ಟುಕೊಂಡು
ನಿತ್ಯ ಪೂಜಿಸುವೆ

ನಿನ್ನುಸಿರಿನಲಿ
ನನ್ನ ಹೆಸರಿರುವಾಗ
ನನ್ನುಸಿರಿನಲಿ
ನಿನ್ನ ಹೆಸರ ಉಸಿರಾಡುವೆ

(ಚಿತ್ರ ಸೆಲೆ: pxhere.com)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. Raghuramu N.V. says:

    ತುಂಬ ಚೆನ್ನಾಗಿದೆ ಸರ್. ನನ್ನ ಉಸಿರಿನಲಿ ನಿನ್ನ ಹೆಸರ ಉಸಿರಾಡುವೆ .. ??

  2. shivamurthy H says:

    ಹೃತ್ಪೂರ್ವಕ ಧನ್ಯವಾದಗಳು ಸರ್

ಅನಿಸಿಕೆ ಬರೆಯಿರಿ:

Enable Notifications